Kannada NewsKarnataka NewsLatest

ಧಾರ್ಮಿಕ ಕಟ್ಟಡಗಳನ್ನು 15 ದಿನದಲ್ಲಿ ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: – ಸರ್ವೋಚ್ಚ ನ್ಯಾಯಾಲಯವು  ನೀಡಿದ ತೀರ್ಪಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕಟ್ಟಡಗಳ ಸರ್ವೆ ಮಾಡಿ ಅನಧೀಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೋಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಾ ಪಂಚಾಯತ್, ಪಿ.ಡಿ.ಓ, ಗ್ರಾಮ ಲೆಕ್ಕಾಧಿಕಾರಿ, ಬಿಲ್ ಕಲೆಕ್ಷರಗಳನ್ನು ಒಳಗೊಂಡು ಎಲ್ಲಾ ತಾಲೂಕು ಮಟ್ಟಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳ ತಂಡ ರಚಿಸಿಕೊಂಡು ಯೋಜನೆಯನ್ನು ರೂಪಿಸಿಕೊಂಡು ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ, ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ೨೦೨೦ರ ಜನವರಿ ೩೧ ರೊಳಗಾಗಿ ಮಾಹಿತಿ, ವರದಿ ಸಲ್ಲಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿರುವುದರಿಂದ ತೆರವುಗೊಳಿಸುವ ವೇಳೆ ಸ್ಥಳೀಯರು, ಆಯಾ ಧರ್ಮದವರ ಮನವೊಲಿಸಿ ಅಥವಾ ಅಂತಹ ಕಟ್ಟಡಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಕಾರ್ಯದಲ್ಲಿ ನಿರತವಾಗುವ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳಿಗೆ ಸೂಕ್ತವಾದ ಪೊಲೀಸ್ ರಕ್ಷಣೆ ಒದಗಿಸುವುದು. ಈ ಕಾರ್ಯದಲ್ಲಿ ಅಡ್ಡಿಪಡಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡಗಳು ಸ್ಥಾಪನೆಯಾಗಿರುವ ಕುರಿತು ಮಾಹಿತಿಯನ್ನು ನೀಡಲು ಅನುಕೂಲವಾಗುವಂತೆ ತಾಲ್ಲೂಕಾ ಹಾಗೂ ಜಿಲ್ಲಾ ಮಟ್ಟದ ದೂರವಾಣಿ ಸಂಖ್ಯೆಗಳ ವಿವರವನ್ನು ನೀಡಲಾಗಿದೆ. ಇ-ಮೇಲ್ [email protected] ಮೂಲಕ ಈ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆಗಳ ವಿವರ:
ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ೦೮೩೧-೨೪೦೬೩೧೫, ಮಹಾನಗರ ಪಾಲಿಕೆ ಬೆಳಗಾವಿ ೦೮೩೧-೨೪೦೫೩೦೪, ಉಪವಿಭಾಗಾಧಿಕಾರಿಗಳು ಬೆಳಗಾವಿ ೦೮೩೧-೨೪೦೭೨೮೪, ಉಪವಿಭಾಗಾಧಿಕಾರಿಗಳು ಬೈಲಹೊಂಗಲ ೦೮೨೮೮-೨೩೩೧೬೦, ಉಪವಿಭಾಗಾಧಿಕಾರಿಗಳು ಚಿಕ್ಕೋಡಿ ೨೮೩೩೮-೨೭೨೧೩೨, ತಹಶೀಲ್ದಾರ ಬೆಳಗಾವಿ ೦೮೩೧-೨೪೦೭೨೮೬, ತಹಶೀಲ್ದಾರ ಖಾನಾಪೂರ ೦೮೩೩೬-೨೨೨೨೨೫, ತಹಶೀಲ್ದಾರ ಹುಕ್ಕೇರಿ ೦೮೩೩೩-೨೬೫೦೩೬, ತಹಶೀಲ್ದಾರ ಕಿತ್ತೂರ ೦೮೨೨೮-೨೮೬೧೦೬, ತಹಶೀಲ್ದಾರ ಸವದತ್ತಿ ೦೮೩೩೦-೨೨೨೨೨೩, ತಹಶೀಲ್ದಾರ ರಾಮದುರ್ಗ ೦೮೩೩೫-೨೪೨೧೬೨, ತಹಶೀಲ್ದಾರ ಗೋಕಾಕ ೦೮೩೩೨-೨೨೫೦೭೩, ತಹಶೀಲ್ದಾರ ಮೂಡಲಗಿ ೦೮೩೩೪-೨೫೧೨೧೨, ತಹಶೀಲ್ದಾರ ಚಿಕೋಡಿ, ೦೮೩೩೮-೨೭೨೧೩೦, ತಹಶೀಲ್ದಾರ ನಿಪ್ಪಾಣ ೦೮೩೩೮-೨೨೦೩೯೫, ತಹಶೀಲ್ದಾರ ಬೈಲಹೊಂಗಲ ೦೮೨೨೮-೨೩೩೧೫೨, ತಹಶೀಲ್ದಾರ ರಾಯಬಾಗ ೦೮೩೩೧-೨೨೫೨೪೭, ತಹಶೀಲ್ದಾರ ಕಾಗವಾಡ ೯೪೪೮೫೨೭೪೧೧೧ ಗೆ ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button