
ಪ್ರಗತಿವಾಹಿನಿ ಸುದ್ದಿ, ಕಾರವಾರ : ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಂಗಳವಾರ ಕಾರವಾರ ನಗರದ 4 ಬಿಸಿಎಮ್ ಹಾಸ್ಟಲ್ ಗೆ ಹಠಾತ್ ಭೇಟಿ ನೀಡಿದರು.
ಕಾರವಾರ ನಗರದ ಕುರ್ಸವಾಡದ ವೃತ್ತಿಪರ ಮೆಟ್ರಿಕ್ ನಂತರರ ಬಾಲಕರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ನಂತರದ ಸಾಮಾನ್ಯ ಮತ್ತು ಮಾದರಿ ಬಾಲಕರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಸ್ಟಲ್ ಶೌಚಾಲಯ , ಕೊಠಡಿ ಸ್ವಚ್ಛತೆ ಪರಿಶೀಲಿಸಿದರು. ವಿದ್ಯಾರ್ಥಿಗಳ ಜೊತೆ ಕುಳಿತು ಊಟ ಮಾಡುತ್ತಲೇ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಪ್ರತಿ ದಿನ ಗಡಿಯಲ್ಲಿರುವ ಮಾಜಾಳಿಯ ಇಂಜಿನಿಯರಿಂಗ್ ಕಾಲೇಜಿಗೆ ತೆರಳಲು ಬಸ್ ಸಮಸ್ಯೆ ಕುರಿತು ವಿದ್ಯಾರ್ಥಿಗಳು ತಿಳಿಸಿದಾಗ ಸಂಬಂಧಪಟ್ಟ ಅಧಿಕಾರಿಗೆ ಸ್ಥಳದಲ್ಲೇ ಸಂಪರ್ಕಿಸಿ, ವ್ಯವಸ್ಥೆಗೆ ಸೂಚನೆ ನೀಡಿದರು.ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತಿದ್ದಾಗ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ಬಿಸಿಎಮ್ ಹಾಸ್ಟಲ್ ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಜಿಲ್ಲಾಧಿಕಾರಿ ತಮಿಳುನಾಡಿನಲ್ಲಿ ಸರ್ಕಾರಿ ಸೀಟ್ ,ಹಾಸ್ಟಲ್ ಸಿಗಲಿಲ್ಲ ಎಂದರೆ ಆತ ಏನಕ್ಕೂ ಬೇಡ ಎಂದರ್ಥ ಎಂದು ಭಾವಿಸುತ್ತಾರೆ. ನಾನೂ ಕೂಡ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವನು, ಐ.ಎ.ಎಸ್ ಮಾಡುವ ತವಕದಿಂದ ತರಬೇತಿಗಾಗಿ ಸೇರಿದಾಗ ಐ.ಐ.ಟಿ ಯಂತಹ ಉನ್ನತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು ತರಬೇತಿಗೆ ಬಂದಿದ್ದರು. ಅಧ್ಯಯ ಮಾಡಿದರೆ ಸಾಧನೆ ಮಾಡಬಹುದು ಎಂದ ಅವರು ವಿದ್ಯಾರ್ಥಿಗಳಿಗೆ ಸಾಮೂಹಿಕ ಅಧ್ಯಯನ ಹಾಗೂ ವಿಚಾರ ವಿನಿಮಯಕ್ಕೆ ಸಾಮೂಹಿಕ ಗುಂಪು ರಚಿಸುವಂತೆ ಸಲಹೆ ನೀಡಿದರು.




