*ಹೊಂಡದಲ್ಲಿ ಮಹಿಳೆ ಹಾಗೂ ಪುರುಷನ ಮೃತ ದೇಹ ಪತ್ತೆ: ಇಬ್ಬರ ನಡುವೆ ಇತ್ತಾ ಅಕ್ರಮ ಸಂಭದ..?*

ಪ್ರಗತಿವಾಹಿನಿ ಸುದ್ದಿ: ಕೃಷಿ ಹೊಂಡದಲ್ಲಿ ಓರ್ವ ಪುರುಷ ಹಾಗೂ ಮಹಿಳೆಯ ಶವವೊಂದು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ಗುಳ್ಳದ ಬಯಲು ಬಳಿ ಒಡೆಯರಪಾಳ್ಯ ನಿವಾಸಿಗಳಾದ ಮೀನಾಕ್ಷಿ (38) ಹಾಗೂ ರವಿ (40) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಹಾಗೂ ರವಿ ಇಬ್ಬರು ಕೂಡ ಬೇರೆ ಬೇರೆ ಜಾತಿಯಾವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಆದರೆ ಇದೀಗ ಇಬ್ಬರ ಶವ ಕೃಷಿಹೊಂಡದಲ್ಲಿ ಪತ್ತೆಯಾಗಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಅಥವಾ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೀನಾಕ್ಷಿಗೆ ಈ ಹಿಂದೆಯೇ ಮದುವೆಯಾಗಿ ಮೂವರು ಮಕ್ಕಳಿದ್ದರು, ಆದರೆ ರವಿಗೆ ಮದುವೆಯಾಗಿರಲಿಲ್ಲ. ಆದರೆ ಯಾವುದೋ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರು ಒಡೆದಿದೆ. ಇದೇ ಪ್ರೀತಿ ನಡುವೆ ಅಕ್ರಮ ಸಂಬಂಧವಿತ್ತು ಎಂದು ಊರಿನಲ್ಲಿ ಮಾತಾಡುತ್ತಿದ್ದರು.
ಒಂದೆ ಹೊಂಡದಲ್ಲಿ ಮಹಿಳೆ ಹಾಗೂ ಪುರುಷನ ಶವ ಪತ್ತೆ ಆಗಿರುವ ಕಾರಣ ಅಕ್ರಮ ಸಂಬಂಧದ ಕೊಲೆ ಅಥವಾ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.