Latest

*ಫ್ಲ್ಯಾಟ್ ನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಫ್ಲಾಟ್ ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಶವಾಗಿ ಪತ್ತೆಯಾಗಿರುವ ಘಟನೆ ಸೂರತ್ ನ ಜಹಂಗೀರ್ ಪುರ ಪ್ರದೇಶದಲ್ಲಿ ನಡೆದಿದೆ.

ವೃದ್ಧ ಹಾಗೂ ಮೂವರು ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ. ಗ್ಯಾಸ್ ಗೀಸರ್ ಸೋರಿಕೆಯಾಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಫ್ಲಾಟ್ ಮಾಲೀಕ ಜಸುಬೆನ್ ವಧೇಲ್, ಆಕೆಯ ಸಹೋದರಿ ಶಾಂತಾಬೆನ್ (53) ಹಾಗೂ ಗೌರಿ ಬೆನ್ ಮೇವಾಡ್ (55) ಹಾಗೂ ಗೌರಿ ಬೆನ್ ಪತಿ ಹೀರಾಭಾಯಿ(60) ಮೃತರು.

Home add -Advt

ರಾತ್ರಿ ಊಟಮಾಡಿ ಮಲಗಿದ್ದವರು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಜಶು ಬೆನ್ ಪುತ್ರ ಮುಖೇಶ್ ಬೆಳಿಗ್ಗೆ ಚಹಾ ನೀಡಲು ಹೋದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗಾಬರಿಗೊಂಡು ಬಾಗಿಲು ತೆರೆದು ನೋಡಿದರೆ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಸ್ಥಳದಲ್ಲಿ ವಾಂತಿ ಮಾಡಿರುವುದು ಕಂಡುಬಂದಿದೆ. ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆಯಿಂದಷ್ಟೇ ಸತ್ಯಾಸತ್ಯತೆ ತಿಳಿದುಬರಬೇಕಿದೆ.

Related Articles

Back to top button