Kannada NewsKarnataka NewsLatest
ಭೀಕರ ಅಪಘಾತಕ್ಕೆ ಸಂಕೇಶ್ವರದ ವೈದ್ಯ ದಂಪತಿ, ಮಗಳು ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ವೈದ್ಯ ದಂಪತಿ ಹಾಗೂ ಮಗಳು ಮೃತರಾಗಿದ್ದಾರೆ.
ಸಂಕೇಶ್ವರದ ನೇತ್ರ ತಜ್ಞ ಡಾ. ಸಚಿನ್ ಮುರಗುಡೆ (40), ಸ್ತ್ರೀ ರೋಗ ತಜ್ಞೆ ಶ್ವೇತಾ ಮುರಗುಡೆ (38) ಹಾಗೂ ಮಗಳು ಶ್ರಿಯಾ (12) ಮೃತರು.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆನಕನಹಳ್ಳಿ ಬಳಿ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ.
ದಂಪತಿ ಸಂಕೇಶ್ವರದಲ್ಲಿ ಪ್ರಸಿದ್ಧ ಮುರಗುಡೆ ನರ್ಸಿಂಗ್ ಹೋಮ್ ನಡೆಸುತ್ತಿದ್ದರು. ಕುಟುಂಬದಲ್ಲಿ ಈಗ ವೃದ್ದ ತಾಯಿ ಮಾತ್ರ ಉಳಿದಿದ್ದಾರೆ.
ಯಮಕನಮರಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ತಾಯಿಯ ಮೃತದೇಹದೊಂದಿಗೆ 4 ದಿನ ಕಳೆದ ಬಾಲಕ ; ತಾಯಿ ನಿದ್ರಿಸುತ್ತಿದ್ದಾಳೆಂದು ತಿಳಿದು ಶಾಲೆಗೆ ಹೋಗಿ ಬರುತ್ತಿದ್ದ !




