
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ. ನಾಥಾಜಿರಾವ್ ಹಲಗೇಕರ್ ಅವರ ಪತ್ನಿ ಪದ್ಮಜಾದೇವಿ ನಾಥಾಜಿರಾವ ಹಲಗೇಕರ ಶನಿವಾರ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.
ಮರಾಠಾ ಮಂಡಳದ ಹಾಲಿ ಅಧ್ಯಕ್ಷೆ ಡಾ. ರಾಜಶ್ರೀ ನಾಗರಾಜು, ಉಪಾಧ್ಯಕ್ಷ ರಾಜೇಶ ಹಲಗೇಕರ್ ಮತ್ತು ಪುಣೆ ಮೂಲದ ಡಾ. ಸತ್ವಶೀಲಾ ಶಿರೋಳೆ ಅವರ ತಾಯಿ ಮತ್ತು ಮರಾಠಾ ಮಂಡಳದ ಸದಸ್ಯೆ ಧನಶ್ರೀ ರಾಜೇಶ ಹಲಗೇಕರ, ವಿಧಾನ ಪರಿಷತ್ ಸದಸ್ಯ ನಾಗರಾಜು ಯಾದವ ಮತ್ತು ಪುಣೆಯ ಹೆಸರಾಂತ ಕೈಗಾರಿಕೋದ್ಯಮಿ ಚೈತನ್ಯ ಶಿರೋಳೆ ಅವರ ಅತ್ತೆ ಪದ್ಮಜಾ.
ಅಂತ್ಯಕ್ರಿಯೆ ಮೆರವಣಿಗೆ ಕಾಮತ ಗಲ್ಲಿಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಕಾಮತ ಗಲ್ಲಿ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ