ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಕೊರೋನಾದಿಂದಾಗಿ ಖಾನಾಪುರ ತಾಲೂಕಿನ ಮೂವರು ಶಿಕ್ಷಕರು ಸಾವಿಗೀಡಾಗಿದ್ದಾರೆ.
ಕೇವಲ 2 ದಿನದಲ್ಲಿ ಮೂವರು ಸಾವಿಗೀಡಾಗಿದ್ದು, ಇಡೀ ಶಿಕ್ಷಣ ಇಲಾಖೆ ಸಿಬ್ಬಂದಿಗಳಲ್ಲಿ ಆತಂಕ ಉಂಟಾಗಿದೆ.
ತೋಪಿನಕಟ್ಟಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ನಾರಾಯಣ ಕುಂಬಾರ (57) ಭಾನುವಾರ ಮೃತರಾದರೆ ಡೊಂಗರಗಾಂವ್ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮೋಹನ ದಿನಕರ ಮೇಸ್ತ್ರಿ (38) ಹಾಗೂ ಶಿಕ್ಷಣ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದ ಉಮೇಶ ಬಿರಾದಾರ (38) ಸೋಮವಾರ ಮೃತರಾದರು.
ಇನ್ಮುಂದೆ ಸೋಂಕಿತರು ನೇರವಾಗಿ ಆಸ್ಪತ್ರೆಗೆ ದಾಖಲಾಗುವಂತಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ