
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಾಲಕ್ಕೆ ಸರಿಯಾಗಿ ಮಳೆಯಾಗದೇ ಬೆಳೆಹಾನಿಯಾಗಿದ್ದರಿಂದ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರಿಂದ ಮನನೊಂದ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೋಲಗಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದೆ.
ತೋಲಗಿ ಗ್ರಾಮದ ರೈತ ಗದುಗೆಯ್ಯ ಅಲಿಯಾಸ್ ಬಾಬಯ್ಯ ಚಂದ್ರಯ್ಯ ಚಿಕ್ಕಮಠ (೫೫) ಮೃತ ರೈತ. ಇವರು ಖಾಸಗಿ ಸೊಸೈಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಕೃಷಿಗಾಗಿ ಒಟ್ಟು ೩.೨೫ ಲಕ್ಷ ಸಾಲ ಪಡೆದಿದ್ದರು.
ಸಾಲ ಮರುಪಾವತಿ ಬಗ್ಗೆ ಚಿಂತಿತರಾಗಿದ್ದರು. ಇದೇ ಚಿಂತೆಯಲ್ಲಿ ತೋಲಗಿ ಗ್ರಾಮದ ಹೊರವಲಯದ ಸುಬೇದಾರ ಜಮೀನಿನ ಹದ್ದಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ದೂರು ದಾಖಲಿಸಿಕೊಂಡಿರುವ ನಂದಗಡ ಠಾಣೆಯ ಇನ್ಸಪೆಕ್ಟರ್ ಎಸ್.ಬಿ ಮಾಳಗೊಂಡ ತಿಳಿಸಿದ್ದಾರೆ.
ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅರೆಸ್ಟ್