ರಾತ್ರಿ 10 ಗಂಟೆಯೊಳಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ತೀರ್ಮಾನ – ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತೀವ್ರ ಕಗ್ಗಂಟಾಗಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವುದನ್ನು ಇಂದು ರಾತ್ರಿ 10 ಗಂಟೆಯೊಳಗೆ ತೀರ್ಮಾನಿಸುವುದಾಗಿ ಸೂತ್ರದಾರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ವಿವಿಧ ಮುಖಂಡರು ಹಾಗೂ ಆಯ್ದ ನಿರ್ದೇಶಕರೊಂದಿಗೆ ಸಬೆ ನಡೆಸುತ್ತಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ನಿರ್ದೇಶಕರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಅವಿರೋಧ ಆಯ್ಕೆಯಾಗುವುದು ನಿಶ್ಚಿತ ಎಂದರು.
ಅಧ್ಯಕ್ಷಸ್ಥಾನಕ್ಕಾಗಿ ಕೆಲವರು ಪಟ್ಟು ಹಿಡಿದಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು ಅಧ್ಯಕ್ಷರಾಗಬೇಕೆನ್ನುವ ಅಪೇಕ್ಷೆ ಎಲ್ಲರಿಗೂ ಇರುವುದು ಸಹಜ. ಇದು ಭಿನ್ನಮತವಲ್ಲ. ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಯಾವುದೇ ರೀತಿಯ ಸಮಸ್ಯೆಯಾಗದು ಎಂದರು.
ನಿನ್ನೆ ಕೆಲವರು ಸಭೆ ನಡೆಸಿರುವುದು ಆಕಸ್ಮಿಕ. ಅದರಲ್ಲಿ ವಿಶೇಷವೇನಿಲ್ಲ. ಆ ಬಗ್ಗೆ ತಪ್ಪು ಸಂದೇಶ ಬೇಡ. ಬಿಜೆಪಿಯ ಎಲ್ಲ ಮುಖಂಡರೂ ಒಗ್ಗಟ್ಟಾಗಿದ್ದೇವೆ. ಪಕ್ಷದ ಇಮೇಜಿಗೆ ಧಕ್ಕೆಯಾಗದಂತೆ ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಅಧಿಕಾರದಲ್ಲಿದ್ದವರೇ ಮತ್ತೆ ಮತ್ತೆ ಅಧಿಕಾರ ಅನುಭವಿಸುತ್ತಿರುವ ಕುರಿತು ಮತ್ತು ತಮ್ಮದೇ ಕುಟುಂಬದವರಿಗೆ ಅಧಿಕಾರ ಕೊಡಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಆಗಿದ್ದು ನಿಜ. ಮುಂದಿನ ಬಾರಿ ಈ ಬಗ್ಗೆ ಗಮನಹರಿಸಿ ಸರಿಪಡಿಸುತ್ತೇವೆ. ಕಾರ್ಯಕರ್ತರಿಗೆ ಆದ್ಯೆತ ನೀಡಲಾಗುವುದು ಎಂದರು.
ಶನಿವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷಸ್ಥಾನದ ಚುನಾವಣೆ ಘೋಷಣೆಯಾಗಿದೆ. ಹಾಲಿ ಅಧ್ಯಕ್ಷ ರಮೇಶ ಕತ್ತಿ ಮತ್ತೆ ಅಧ್ಯಕ್ಷರಾಗುವುದಕ್ಕೆ ಹೆಚ್ಚಿನ ನಿರ್ದೇಶಕರು ಮತ್ತು ನೌಕರರು ವಿರೋಧಿಸುತ್ತಿರುವುದರಿಂದ ಕಗ್ಗಂಟಾಗಿದೆ.
ಕತ್ತಿ ಬ್ರದರ್ಸ್ ಲಕ್ ಸರಿ ಇದ್ರೆ ಇದೇ ತಿಂಗಳಲ್ಲಿ 2 ಮಹತ್ವದ ಹುದ್ದೆ
ಡಿಸಿಸಿ ಬ್ಯಾಂಕ್: ಅಂಜಲಿ ಬೆಂಬಲಿಸಿ 2 ಸ್ಥಾನ ಕಳೆದುಕೊಂಡ್ರಾ ಕತ್ತಿ ಬ್ರದರ್ಸ್?
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ, ಆದರೆ…. : ರಮೇಶ ಕತ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ