ಪ್ರಗತಿವಾಹಿನಿ ಸುದ್ದಿ, ಪಾಟ್ನಾ: 33 ವರ್ಷಗಳ ಸುದೀರ್ಘ ವಿಚಾರಣೆ ನಂತರ ಪ್ರಕರಣದ ಆರೋಪಿ ಅಪ್ರಾಪ್ತ ಎಂದು ನ್ಯಾಯಾಲಯ ಘೋಷಿಸಿದ್ದು 10 ವರ್ಷಗಳ ನಂತರ ಬಿಡುಗಡೆಗೊಂಡಿದ್ದಾರೆ.
ಇದು ಬಿಹಾರದ 56 ವರ್ಷ ವಯಸ್ಸಿನ ಮುನನಾ ಸಿಂಗ್ ಹೆಸರಿನ ರೈತರೊಬ್ಬರ ಗೋಳಿನ ಕತೆ. 1979 ರಲ್ಲಿ ಮಾರಕಾಸ್ತ್ರಗಳನ್ನು ಹೊಂದಿ ಘರ್ಷಣೆ ನಡೆಸಿದ ಪ್ರಕರಣವೊಂದರಲ್ಲಿ ಈ ರೈತ ಹಾಗೂ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದರು.
ಐಪಿಸಿ ಕಲಂ 148 (ಮಾರಕಾಸ್ತ್ರಗಳನ್ನು ಹೊಂದಿ ಗಲಭೆ ಮಾಡುವುದು) ಹಾಗೂ 307 (ಕೊಲೆ ಯತ್ನ) ಪ್ರಕರಣವನ್ನು ಇವರ ಮೇಲೆ ದಾಖಲಿಸಲಾಗಿತ್ತು.
ವಾಸ್ತವದಲ್ಲಿ ಅಪರಾಧ ಘಟನೆ ನಡೆದಿದ್ದ ಸಂದರ್ಭದಲ್ಲಿ ಮುನ್ನಾಸಿಂಗ್ ಅಪ್ರಾಪ್ತರಾಗಿದ್ದರು. ಆದರೆ ಬರೊಬ್ಬರಿ 33 ವರ್ಷ ವಿಚಾರಣೆ ನಡೆದಿದ್ದರಿಂದ ಅವರು ತಮ್ಮ ಯೌವನವನ್ನೆಲ್ಲ ಇದರಲ್ಲೇ ಕಳೆಯಬೇಕಾಯಿತು.
ಅವರು ಘಟನೆ ನಡೆದಿದ್ದ ಸಂದರ್ಭದಲ್ಲಿ ಅಪ್ರಾಪ್ತರಾಗಿದ್ದರು ಎಂಬ ತೀರ್ಪು 2012ರಲ್ಲಿ ನೀಡಲಾಯಿತು. ಆ ಬಳಿಕ 10 ವರ್ಷಗಳ ನಂತರ ಮುನ್ನಾ ಸಿಂಗ್ ಬಿಡುಗಡೆಗೊಂಡಿದ್ದಾರೆ.
ಆಧುನಿಕ ಭಗೀರಥ, ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ ಇನ್ನಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ