Latest

ದೀಪಾವಳಿ ವಿಶೇಷ ಕಜ್ಜಾಯ -1

ಚಿಲ್ಲಿರೈಸ್

ಇಂದು ಸಹನಾಸ್ ಕಿಚನ್ ಒಂದು ರೈಸ್ ರಿಸಿಪಿಯನ್ನು ನಿಮಗೆ ತಿಳಿಸಿಕೊಡ್ತಾ ಇದೆ . ಚಿಲ್ಲಿ ರೈಸ್ ತುಂಬಾನೇ ರುಚಿಯಾಗಿರುತ್ತೆ ಹಾಗೂ ಮಾಡುವುದು ತುಂಬಾನೇ ಸುಲಭ ಕೂಡಾ.

 

 

ಬೇಕಾಗುವ ಸಾಮಗ್ರಿ:
ಎರಡು ಕಪ್ ಅಕ್ಕಿ ಯಿಂದ  ಮಾಡಿದ ಅನ್ನ ,ಕುತ್ತುಂಬ್ರಿಸೊಪ್ಪು ಒಂದು ದೊಡ್ಡಕಟ್ಟು, 5-6 ಹಸಿಮೆಣಸು,ಚಕ್ಕೆ ಅರ್ಧ ಇಂಚು, ಲವಂಗ 3-4,  ಬೆಳ್ಳುಳ್ಳಿ ಒಂದು ದೊಡ್ಡ ಗಡ್ಡೆ, ಈರುಳ್ಳಿ 2, ಬೇಯಿಸಿದ ಆಲುಗಡ್ಡೆ 2,ಡೊಣ್ಣಮೆಣಸು 1, ರುಚಿಗೆ ತಕ್ಕಸ್ಟು ಉಪ್ಪು.  ಒಗ್ಗರಣೆಗೆ  ಸ್ವಲ್ಪ ಎಣ್ಣೆ
ಮಾಡುವ ವಿಧಾನ:
ಅನ್ನವನ್ನು ಉದುರಾಗಿ ಮಾಡಿಕೊಳ್ಳಬೇಕು.
 ಕುತ್ತುಂಬ್ರಿ ಸೊಪ್ಪು, ಹಸಿಮೆಣಸು , ಚಕ್ಕೆ, ಲವಂಗ, ಬೆಳ್ಳುಳ್ಳಿ ಸೇರಿಸಿ ಪೇಸ್ಟ ಮಾಡಿ ಇಡಬೇಕು.
ಬೇಯಿಸಿಟ್ಟ ಆಲುಗಡ್ಡೆಯನ್ನು ದೊಡ್ಡ ದೊಡ್ಡ ಹೋಳುಗಳನ್ನಾಗಿ ಮಾಡಿಡಬೇಕು.ಹಾಗೆ ಈರುಳ್ಳಿ ಮತ್ತು ಡೊಣ್ಣಮೆಣಸನ್ನು ಉದ್ದವಾಗಿ ಹೆಚ್ಚಿಡಬೇಕು.
ದೊಡ್ಡಬಾಣಲೆಯಲ್ಲಿ ಸ್ವಲ್ಪ ಎಣ್ಣೆಹಾಕಿ ಕಾದನಂತರ  ಈರುಳ್ಳಿ ಡೊಣ್ಣಮೆಣಸಿನ ಹೋಳನ್ನು ಹಾಕಿ ಹುರಿಯಬೇಕು. ಇದು ಸ್ವಲ್ಪ ಬಾಡಿದ ನಂತರ ಮೊದಲು ಮಾಡಿಟ್ಟ ಹಸಿಮೆಣಸು ಕುತ್ತುಂಬ್ರಿಯ ಪೇಸ್ಟನ್ನಾ ಹಾಕಿ ಚನ್ನಾಗಿ ಹುರಿಯ ಬೇಕು.ಹಸಿವಾಸನೆ ಹೋದಮೇಲೆ ರುಚಿಗೆ ತಕ್ಕಸ್ಟು ಉಪ್ಪು ಬೇಯಿಸಿಟ್ಟ ಆಲುಗಡ್ಡೆ ಮತ್ತು ಅನ್ನವನ್ನು ಸೇರಿಸಿ ಚನ್ನಾಗಿ ಮಿಕ್ಸಮಾಡಬೇಕು.
ರುಚಿಕರವಾದ ಚಿಲ್ಲಿ ರೈಸ್ಖ ಸವಿಯಲು  ರೆಡಿಯಾಗಿದೆ.
( ಸೂಚನೆ : ಬ್ರೆಡನ್ನು  ದೊಡ್ಡ ದೊಡ್ಡ  ಚೂರುಗಳನ್ನಾಗಿ  ರೋಸ್ಟ್ ಮಾಡಿ ಸೇರಿಸಬಹುದು)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button