Kannada NewsKarnataka NewsLatestPolitics

*ಪಟಾಕಿ ಮಾರಾಟಕ್ಕೆ ಪೊಲೀಸ್ ಇಲಾಖೆಯಿಂದ ಸುತ್ತೋಲೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ಮಾರಾಟಕ್ಕೆ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪಟಾಕಿ ಅವಘಡಗಳನ್ನು ತಡೆಯಲು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ, ಇತರೆ ಅವಘಡಗಳನ್ನು ತಡೆಯಲು ಕೆಲ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಸುಪ್ರೀಂ ಕೋರ್ಟ್ ನಿಯಮದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟಮಾಡಬೇಕು.

ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರಬೇಕು. ಕ್ಯೂಆರ್ ಕೋಡ್ ಕೂಡ ಇರಬೇಕು

ಪಟಾಕಿ ಮಳಿಗೆಗಳಲ್ಲಿ ಎರಡುಕಡೆ ಸರಾಗವಾಗಿ ಗಾಳಿಯಾಡುವಂತಿರಬೇಕು

ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಧನಗಳು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವಂತಿರಬಾರದು.

ಪ್ರತಿ ಮಳಿಗೆಗಳ ಗಾತ್ರ 10X10 ಅಡಿಗೆ ಸೀಮಿತಗೊಳಿಸಿರಬೇಕು. ಹೆಚ್ಚಿನ ದಾಸ್ತಾನು ವ್ಯವಸ್ಥೆ ಇರಬಾರದು.

ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 3 ಮೀಟರ್ ಅಂತರ ಇರಬೇಕು. ಮಳಿಗೆ ಯಾವುದೇ ರಕ್ಷಿತ ಕಾರ್ಯದಿಂದ ಅಥವಾ ಸ್ಥಳದಿಂದ 50 ಮೀಟರ್ ದೂರವಿರಬೇಕು.

ಮಳಿಗೆಗಳು ಕಚೇರಿಯಿಂದ ಪಡೆದಿರುವ ಪರವಾನಿಗೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಲು.

ಭಾರತೀಯ ತಯಾರಿಕಾ ಕಂಪನಿಗಳ ಪಟಾಕಿಗಳನ್ನು ಮಾತ್ರ ಮರಾಟ ಮಾಡಬೇಕು.

ಪ್ರತಿ ಮಳಿಗೆಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಪ್ರಜರ್ ಮಾದರಿ ಅಗ್ನಿನಂದಕ ಹಾಗು ಎರಡು ಬಕೆಟ್ ಗಳಲ್ಲಿ ನೀರನ್ನು ಇಟ್ಟಿರಬೇಕು

ಎರಡು ಡ್ರಮ್ ಗಳಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು.

ಮಳಿಗೆಗಳ ಬಳಿ ಧೂಮಪಾನಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಸೂಚನಾ ಫಲಕ ಕಡ್ಡಾಯ.

ಪಟಾಕಿಗಳನ್ನು ಹಗಲಿನ ವೇಳೆ ಮಾತ್ರ ಮಾರಾಟ ಮಾಡಬೇಕು

ಪಟಾಕಿ ಮಳಿಗೆಗಳಲ್ಲಿ ರಾತ್ರಿ ಯಾರೂ ಮಲಗುವಂತಿಲ್ಲ.

Related Articles

Back to top button