ಆಸ್ಪತ್ರೆಗೆ ದಾಖಲು
ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಪಟಾಕಿ ಸಿಡಿಸುವ ವೇಳೆ ಹಲವು ಮಕ್ಕಳು ಕಣ್ಣುಗಳಿಗೆ ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ 7 ಮಕ್ಕಳು ಗಾಯಗೊಂಡಿದ್ದು, ಪ್ರಮುಖ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಂಕರ ಆಸ್ಪತ್ರೆಯಲಿ ಮೂವರು, ನಾರಾಯಣ ನೇತ್ರಾಲಯದಲ್ಲಿ ಮೂವರು ಹಾಗೀ ಮುಂಟೋ ಆಸ್ಪತ್ರೆಯಲ್ಲಿ ಒಬ್ಬರು ದಾಖಲಾಗಿದ್ದು, ಎಲ್ಲರೂ ಕಣ್ಣಿಗೆ ಪಟಾಕಿ ಕಿಡಿ ತಗುಲಿ ಗಾಯಗೊಮ್ದವರಾಗಿದ್ದಾರೆ.
8 ವರ್ಷದ ಬಾಲಕನೊಬ್ಬನಿಗೆ ಕಣ್ಣಿಗೆ ಗಂಭೀರವಾದ ಗಾಯಗಳಾಗಿದ್ದು, ಬಾಲಕನಿಗೆ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಕಣ್ಣಿಗೆ ಪಟಾಕಿ ಕಿಡಿ ಬಿದ್ದಿರುವುದರಿಂದ ಆತ ದೃಷ್ಟಿಕಳೆದುಕೊಳ್ಳುವ ಆತಂಕವಿದೆ ಎನ್ನಲಾಗಿದೆ.
ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಮೂರು ವರ್ಷದ ಬಾಲಕಿಯ ಕಣ್ಣಿಗೆ ಗಾಯಗಳಾಗಿದ್ದು, ಕಾರ್ನಿಯಾ ಹಾನಿಯಾಗಿದೆ.
ಪಟಾಕಿ ಹಚ್ಚುವ ವೇಳೆ ಮಕ್ಕಳನ್ನು ಬಿಡದಂತೆ ಹಾಗೂ ಪೋಷಕರು ಈ ಬಗ್ಗೆ ಗಮನಹರಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷ್ನರ್ ದೀಪಾವಳಿಗೆ ಒಂದು ದಿನ ಮೊದಲೇ ಸೂಚನೆ ನೀಡಿದ್ದರು. ಆದಾಗ್ಯೂ ಪಟಾಕಿ ಅವಘಡದಲ್ಲಿ ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ