Karnataka News

*ದೀಪಾವಳಿ ಹಿನ್ನೆಲೆ: ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ವಿಶೇಷ ರೈಲು ಸಂಚಾರ*

ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಇದೆ. ದೀಪಾವಳಿ ಹಬ್ಬದ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಜನರ ಅನುಕೂಲಕ್ಕಾಗಿ ರಾಜ್ಯಾದ್ಯಂತ ವಿಶೇಷ ರೈಲು ಸಂಚರಿಸಲಿದೆ.

ಈ ಬಗ್ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕಾಗಿ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದೇ ಅಕ್ಟೋಬರ್ 31, 2024 ರಿಂದ ನವೆಂಬರ್ 2, 2024 ರ ವರೆಗೆ ರಾಜ್ಯದಾದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಬೆಳಗಾವಿಯಿಂದ ಮೀರಜ್, ಬೆಂಗಳೂರಿನಿಂದ ಬೆಳಗಾವಿ, ಮೈಸೂರಿನಿಂದ ವಿಜಯಪುರದವರೆಗೆ ಹಾಗೂ ವಿಸ್ತರಿತ ರೈಲ್ವೆ ಮಾರ್ಗ ಹುಬ್ಬಳ್ಳಿಯಿಂದ ರಾಮೇಶ್ವರಂ ಹಾಗೂ ಋಷಿಕೇಶದಿಂದ ಹುಬ್ಬಳ್ಳಿವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ.

ಪ್ರಯಾಣಿಕರಿಗೆ ಉತ್ತಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಭಾರತೀಯ ರೈಲ್ವೆ ಒಟ್ಟು 34 ವಿಶೇಷ ರೈಲುಗಳ ವ್ಯವಸ್ಥೆಮಾಡಿದೆ. ಸಾರ್ವಜನಿಕರು ಈ ವಿಶೇಷ ರೈಲುಗಳ ಸೌಲಭ್ಯ ಪಡೆದುಕೊಳ್ಳಿ, ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button