
ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ದೆಹಲಿಯಲ್ಲಿ 100 ವಿಮಾನಗಳ ಹಾರಾಟ ದಿಢೀರ್ ರದ್ದಾಗಿದ್ದು, 400ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಹಾಗೂ ವಾಯುಮಾಲಿನ್ಯದಿಂದಾಗಿ ಹೊಗೆ ರೀತಿಯ ವಾತಾವರಣವಿದ್ದು, ರನ್ ವೇ ಗಳು ಕಾಣದಷ್ಟು ದುಸ್ಥರವಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ವ್ಮಾನಗಳ ಹಾರಾಟ ರದ್ದಾಗಿವೆ. ದೆಹಲಿ ಏರ್ ಪೋರ್ಟ್ ನಿಂದ ಟೇಕ್ ಆಫ್ ಆಗಬೇಕಿದ್ದ ಹಾಗೂ ಲ್ಯಾಂಡಿಗ್ ಆಗಬೇಕಿದ್ದ 400ಕ್ಕೂ ಹೆಚ್ಚು ವಿಮಾನಗಳು ವ್ಯತ್ಯಯವಾಗಿವೆ.
ಇದೇ ವೇಳೆ ದೆಹಲಿಯಿಂದ ಹೊರಡಬೇಕಿದ್ದ 60ಕ್ಕೂ ಹೆಚ್ಚು ರೈಲುಗಳು ಕೂಡ ರದ್ದಾಗಿವೆ. ಹಲವು ರೈಲುಗಳು ವಿಳಂಬವಾಗಿವೆ.
ಮತ್ತೊಂದೆಡೆ ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೂ ಹವಾಮಾನ ವೈಪರೀತ್ಯ ತಟ್ಟಿದೆ. ಜೋರ್ಡಾನ್, ಇಥಿಯೋಪಿಯಾ, ಓಮನ್ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಹವಾಮಾನ ವೈಪರೀತ್ಯದಿಂದಾಗಿ ಕೊಂಚ ವಿಳಂಬವಾಗಿ ಹೊರಡಬೇಕಾಯಿತು.

