Latest

ಮಾಸ್ಕ್ ಧರಿಸದಿದ್ದರೆ ಬೀಳಲಿದೆ 2000ರೂ ದಂಡ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ದೆಹಲಿ ಸರ್ಕಾರ ದಂಡದ ಮೊತ್ತವನ್ನು 2000ರೂ ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಆರರಿಂದ ಏಳು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸಾರ್ವಜನಿಕರು ಮಾಸ್ಕ್ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಕಠಿಣ ಕ್ರಮ ಕೈಗೊಂಡಿರುವ ಸರ್ಕಾರ 500 ರೂ ಇದ್ದ ಮಾಸ್ಕ್ ದಂಡದ ಮೊತ್ತವನ್ನು 2000 ರೂ ಗೆ ಹೆಚ್ಚಳ ಮಾಡಿದೆ.

ಈ ಬಗ್ಗೆ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Home add -Advt

Related Articles

Back to top button