Kannada NewsLatestNationalPolitics
*ಸರ್ಕಾರಿ ನೌಕರರಿಗೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಂ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಇಂಧನ ಉಳಿತಾಯಕ್ಕೆ ಹಾಗೂ ವರ್ಕ್ ಫ್ರಂ ಹೋಂಗೆ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸರ್ಕಾರಿ ನೌಕರರಿಗೆ ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಂ ಘೋಷಿಸಿದ್ದಾರೆ.
ಅಧಿಕಾರಿಗಳ ವಾಅಹನಗಳಿಗೆ ನೀಡಲಾಗುವ ಪೆಟ್ರೋಲ್ ಹಾಗೂ ಡೀಸೆಲ್ ಸಹಾಯಧನದಲ್ಲಿ ಶೇ.20ರಷ್ಟು ಕಡಿತಗೊಳಿಸಲಾಗುವುದು. ಎಲ್ಲಾ ಸಚಿವರು ಹಾಗೂ ಅಧಿಕಾರಿಗಳು ಪ್ರತಿ ಸೋಮವಾರ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂದು ಆದೇಶ ನೀಡಿದ್ದಾರೆ.
ದೆಹಲಿಯಲ್ಲಿ ಜಾರಿಗೆ ತರಲಾದ ಹೊಸ ನಿಯಮದ ಪ್ರಕಾರ ದೆಹಲಿಯ ಎಲ್ಲಾ ಸರ್ಕಾರಿ ಉದ್ಯೋಗಿಗಳು ವಾರದಲ್ಲಿ 2 ದಿನ ವರ್ಕ್ ಫ್ರಂ ಹೋಂ ಅಥವಾ ಮನೆಯಿಂದಲೇ ಕೆಲಸ ಮಾಡಬೇಕು ಪ್ರಯಾಣ ಮತ್ತು ಇಂಧನ ಬಳಕೆ ಮಿತಗೊಳಿಸಲು ಶೇ50ರಷ್ಟು ಅಧಿಕೃತ ಸಭೆಗಳನ್ನು ಆನ್ ಲೈನ್ ಮೂಲಕ ನಡೆಸಲಾಗುವುದು. ಒಂದು ವರ್ಷಗಳ ಕಾಲ ಸಚಿವರು, ಅಧಿಕಾರಿಗಳು ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.




