National

*ಕುಸಿದು ಬಿದ್ದ ಏರ್ ಪೋರ್ಟ್ ಮೇಲ್ಛಾವಣಿ; ಓರ್ವ ಸಾವು; ಮೂವರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ ಅವಾಂತರದಿಂದ ಏರ್ ಪೋರ್ಟ್ ಮೇಲ್ಛಾವಣಿಯೇ ಕುಸಿದು ಬಿದ್ದ ಘಟನೆ ನಡೆದಿದೆ. ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದು, 6ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Home add -Advt

ತಡರಾತ್ರಿ ದೆಹಲಿಯಲ್ಲಿ ವರುಣಾರ್ಭಟ ಜೋರಾಗಿದ್ದು, ಇಂದು ಮುಂಜಾನೆ ವೇಳೆ ಇದ್ದಕ್ಕಿದ್ದಂತೆ ಏರ್ ಪೋರ್ಟ್ ಮೇಲ್ಛಾವಣಿ ಕುಸಿದು ಬಿದ್ದಿದೆ. ವಾಹನಗಳು ಜಖಂಗೊಂಡಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.

6ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಏರ್ ಪೋರ್ಟ್ ಟರ್ಮಿನಲ್ 1ರಲ್ಲಿ ಈ ದುರಂತ ಸಂಭವಿಸಿದೆ. ತಾತ್ಕಾಲಿಕವಾಗಿ ಟರ್ಮಿನಲ್ 1ರ ನಿರ್ಗಮನ, ಚೆಕ್-ಇನ್ ಕೌಂಟರ್ ಸ್ಥಗಿತಗೊಳಿಸಲಾಗಿದ್ದು, ಕೆಲ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ.


Related Articles

Back to top button