ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ ಪ್ರಕರಣದ ಹಿಂದೆ ನಟ ದೀಪ್ ಸಿಧು ಕೈವಾಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ದೀಪ್ ಸಿಧು ಬಿಜೆಪಿ ಕಾರ್ಯಕರ್ತ ಆತ ಸಿಖ್ ಸಮುದಾಯದವರಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಡಿದ ಅವರು, ನಟ ದೀಪ್ ಸಿಧು ಸಿಖ್ ಸಮುದಾಯದವರಲ್ಲ, ಅವರು ಬಿಜೆಪಿಯವರು. ಪ್ರಧಾನಿ ಮೋದಿ ಅವರೊಂದಿಗೆ ದೀಪ್ ಸಿಧು ಇರುವ ಫೋಟೊಗಳು ವೈರಲ್ ಆಗಿವೆ. ಇದು ರೈತರ ಆಂದೋಲನ. ಬ್ಯಾರಿಕೇಡ್ ಮುರಿದವರು ಎಂದಿಗೂ ಚಳುವಳಿಯ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.
ಅನಕ್ಷರಸ್ತರು ಟ್ರ್ಯಾಕ್ಟರ್ ಓಡಿಸುತ್ತಿದ್ದರು. ಅವರಿಗೆ ದೆಹಲಿಯ ಮಾರ್ಗಗಳ ಬಗ್ಗೆಯೂ ತಿಳಿದಿರಲಿಲ್ಲ. ಅಧಿಕಾರಿಗಳು ದೆಹಲಿಗೆ ಹೋಗುವ ಮಾರ್ಗ ತಿಳಿಸಿದರು. ಅವರು ದೆಹಲಿಗೆ ಹೋಗಿ ವಾಪಸ್ ಮನೆಗೆ ಮರಳಿದ್ದಾರೆ. ಆದರೆ ಕೆಲವರು ದಾರಿ ತಿಳಿಯದೇ ಕೆಂಪುಕೋಟೆ ಕಡೆಗೆ ಹೋಗಿದ್ದಾರೆ. ಬಳಿಕ ಅಲ್ಲಿಂದ ತೆರಳಲು ಪೊಲೀಸರು ಮಾರ್ಗದರ್ಶನ ನೀಡಿದರು ಎಂದು ತಿಳಿಸಿದ್ದಾರೆ.
ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಾಟ; ಪ್ರಕರಣದ ಹಿಂದೆ ಖ್ಯಾತ ನಟನ ಕೈವಾಡ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ