Kannada NewsKarnataka NewsNationalPolitics

*ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಸತ್ತವರ ಹೆಸರಿನಲ್ಲಿ ಮೂಡಾ ಜಮೀನು ಡಿನೋಟಿಫಿಕೇಶನ್: ಹೆಚ್‌ಡಿ ಕುಮಾರಸ್ವಾಮಿ ಆರೋಪ* 

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಈ ಹಿಂದೆ ಡಿಸಿಎಂ ಆಗಿದ್ದಾಗಲೇ ಸತ್ತವರ ಹೆಸರಲ್ಲಿ ಈ ಜಮೀನು ಡಿ ನೋಟಿಫಿಕೇಷನ್ ಆಗಿದೆ  ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮುಡಾ ಹಗರಣಕ್ಕೆ ಸ್ಫೋಟಕ ಟ್ವಿಸ್ಟ್ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌ಡಿಕೆ, ಮೂಡಾ ಹಗರಣ ಆಸ್ತಿಗೆ 62 ಕೋಟಿ ಕೊಡಬೇಕಂತೆ. ಯಾರಪ್ಪನ ಆಸ್ತಿ ಅಂತಾ 62 ಕೋಟಿ ಹಣ? ಪಿತ್ರಾರ್ಜಿತ ಆಸ್ತಿನಾ? ಯಾರ ಬಳಿ ಖರೀದಿ ಮಾಡಿದ್ದೀರಾ? ಎಂದು ಕುಮಾರಸ್ವಾಮಿ ದಾಖಲೆ ಪ್ರದರ್ಶನ ಮಾಡಿದ್ದಾರೆ.

1992 ರಲ್ಲಿ ಮೂಡಾ ಜಮೀನು ವಶಕ್ಕೆ ನೋಟಿಫಿಕೇಷನ್ ನೀಡಲಾಗಿತ್ತು. 1995 ರಲ್ಲಿ ಜಮೀನು ಫೈನಲ್ ನೋಟಿಫಿಕೇಷನ್. 3 ಎಕರೆ 16 ಗುಂಟೆ ಜಮೀನಿಗೆ 1997 ರಲ್ಲೇ ಮೂಡಾದಿಂದ ಕೋರ್ಟಿಗೆ ಹಣ ಸಂದಾಯ ಆಗಿದೆ. ನಿಂಗಾ ಅಲಿಯಾಸ್ ಜವರ ಜಮೀನು ಮೂಲದಾರರು. ಡಿನೋಟಿಫಿಕೇಷನ್ ಆದ ನಾಲ್ಕು ವರ್ಷ ಏಕೆ ಏನು ಬೆಳವಣಿಗೆ ಆಗಲಿಲ್ಲ? ಬಳಿಕ ಸತ್ತವರ ಹೆಸರಲ್ಲಿ ಈ ಜಮೀನು ಡಿ ನೋಟಿಫಿಕೇಷನ್ ಆಗಿದೆ. ಈ ಘಟನೆ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ತಿಳಿಸಿದರು.

1998 ರಲ್ಲಿ ನಿಂಗ ಹೆಸರಲ್ಲಿ ಡಿನೋಟಿಪಿಕೇಷನ್ ಆಗಿದೆ. ಆಗ ಮುಡಾದಿಂದ ದುಡ್ಡು ಹೋಗಿದೆ. ಆದರೆ 1992 ರಲ್ಲಿ ಈ ಜಮೀನಿಗೆ ಪೋತಿ ಖಾತೆ ಆಗಿದೆ. ಹಾಗಿದ್ದರೆ 1998 ರಲ್ಲಿ ನಿಂಗ ಹೇಗೆ ಬಂದರು? 2004 ಅಕ್ಟೋಬರ್ ನಲ್ಲಿ ದೇವರಾಜು ಅವರಿಂದ ಮಲ್ಲಿಕಾರ್ಜುನ ಸ್ವಾಮಿ ಈ ಜಮೀನು ಖರೀದಿ ಮಾಡುತ್ತಾರೆ. 2005 ರಲ್ಲಿ ಡಿಸಿ ಮುಂದೆ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಬದಲಾವಣೆಗೆ ಅರ್ಜಿ ಹಾಕುತ್ತಾರೆ. 2005 ರಲ್ಲಿ ಡಿಸಿಎಂ ಆಗಿದ್ದವರು ಸಿದ್ದರಾಮಯ್ಯ ಎಂದರು.

ಭೂಮಿ ಬದಲಾವಣೆ ಆದಾಗ ಡಿಸಿ ಏನು ಮಾಡುತ್ತಿದ್ದರು? ಜಮೀನು ಹಿನ್ನಲೆ ಚೆಕ್ ಮಾಡಲಿಲ್ವಾ? ಸಿದ್ದರಾಮಯ್ಯ ಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಅಂತಾ ತೋರಿಸುತ್ತಾರೆ. ಆಗಲೆ ಚೇಂಜ್ ಆಪ್ ಲ್ಯಾಂಡ್ ಆಗಿದೆ. ಸಿದ್ದರಾಮಯ್ಯ ಬಾಮೈದ ಖರೀದಿ ಮಾಡಿದ ಕೆಸರು ಜಮೀನು ಸರ್ಕಾರ ಜಮೀನು ಎಂದು ಹೆಚ್‌ಡಿಕೆ ಗಂಭೀರ ಆರೋಪ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button