Belagavi NewsBelgaum NewsEducationKannada NewsKarnataka NewsLatest
*ಫೆ.6 ರಂದು 4ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 4ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನವು ಫೆ. 6(ಶುಕ್ರವಾರ) ಮುಂಜಾನೆ 8.30 ಗಂಟೆಗೆ ಖಾನಾಪುರದಲ್ಲಿನ ಪೋಲಿಸ್ ತರಬೇತಿ ಶಾಲೆಯ ಕವಾಯತ ಮೈದಾನದಲ್ಲಿ ಜರುಗಲಿದೆ.
ಅಪರ ಪೋಲೀಸ್ ಮಹಾನಿರ್ದೆಶಕರಾದ ದೇವಜ್ಯೋತಿ ರೇ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಬೆಳಗಾವಿ ಉತ್ತರ ವಲಯದ ಪೋಲಿಸ್ ಮಹಾನೀರಿಕ್ಷಕರಾದ ಡಾ.ಚೇತನಸಿಂಗ್ ರಾಠೋರ್, ಬೆಳಗಾವಿ ನಗರ ಪೋಲಿಸ್ ಆಯುಕ್ತರಾದ ಬೊರಸೆ ಭೂಷಣ್ ಗುಲಾಬರಾವ್, ಉಪ ಪೋಲಿಸ್ ಮಹಾನೀರಿಕ್ಷಕರಾದ ಡಿ.ದೇವರಾಜ, ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.




