ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಲಿಪ್ಟ ಆಪ್ ಬೆಳಗಾವಿ ಸ್ಟಾರ್ಟ ಅಪ್” ಮತ್ತು ಸ್ಟೂಡೆಂಟ್ ಸ್ಟಾರ್ಟ ಅಪ್ ಚಾಲೆಂಜ್ ಕಾರ್ಯಕ್ರಮಗಳಿಗೆ ಚಾಲನೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು) ಬೆಳಗಾವಿಯಲ್ಲಿ ಸ್ಥಾಪಿಸಲಾದ ಸೆಕ್ಷನ್ ೮ ಕಂಪನಿ ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೊವೆಶನ ಫೌಂಡೇಶನ್ (ವಿ ಆರ್ ಐ ಎಪ್) ವತಿಯಿಂದ ಟೈ ಬೆಂಗಳೂರು, ಸೆಲ್ಕೊ ಫೌಂಡೇಶನ್ ಮತ್ತು ವಾದ್ವಾನಿ ಫೌಂಡೇಶನ್ ಸಹಯೋಗದಲ್ಲಿ ಉತ್ತರ ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು ದಿನದ ಡಿಸೈನ್ ಥಿಂಕಿಂಗ ಕಾರ್ಯಾಗಾರವನ್ನು ಹಮ್ಮಿಕೊಂಡು “ಲಿಪ್ಟ ಆಪ್ ಬೆಳಗಾವಿ ಸ್ಟಾರ್ಟ ಅಪ್” ಮತ್ತು ಸ್ಟೂಡೆಂಟ್ ಸ್ಟಾರ್ಟ ಅಪ್ ಚಾಲೆಂಜ್ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಕಾರ್ಯಾಗಾರ ಹಾಗೂ ಸ್ಟಾರ್ಟ ಅಪ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ವೇದಿಕೆ ಮೇಲೆ ಸೆಲ್ಕೊ ಫೌಂಡೇಶನ್ ನ ಸಿನಿಯರ್ ಪ್ರೊಗ್ರಾಮ್ ಮ್ಯಾನೇಜರ್ ಆದ ಶ್ರೀಲಕ್ಷ್ಮೀ ಉನ್ನಿ, ಕುಲಸಚಿವರುಗಳಾದ ಪ್ರೊ ಬಿ ಈ ರಂಗಸ್ವಾಮಿ, ಪ್ರೊ ಟಿ ಎನ್ ಶ್ರೀನಿವಾಸ, ಹಣಕಾಸು ಅಧಿಕಾರಿ ಶ್ರೀಮತಿ ಎಂ ಎ ಸಪ್ನಾ , ವಿ ಆರ್ ಐ ಎಪ್ ನ ಸಂಯೋಜನಾಧಿಕಾರಿ ಶ್ರಿ ಸಂತೋಷ ಇಟ್ಟಣಗಿ ಹಾಜರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಅವರು, ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ನಾಗರೀಕರನ್ನಾಗಿ ಮಾಡಿ ವಿಕಸಿತ ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ವಿ ಟಿ ಯು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ ಎಂದು ಹೇಳಿದರು. ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸನಲ್ಲೆ ಅನೇಕ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೆ ವೇದಿಕೆಯಲ್ಲಿ ತಂದು ಇಂಟರ್ನಿಶಪ್ ಮತ್ತು ತರಬೇತಿ ಮೂಲಕ ಇಂದಿನ ಔದ್ಯೋಗಿಕ ವಲಯಕ್ಕೆ ಅವಶ್ಯಕತೆ ಇರುವ ಕೌಶಲಗಳನ್ನು ನೀಡಲಾಗುತ್ತಿದೆ ಅದಕ್ಕಾಗಿ ಸಿ ಎನ್ ಸಿ ವರ್ಕಶಾಪ್ ಸ್ಥಾಪಿಸಲಾಗಿದೆ ಮತ್ತು ಇದೆ ತರಹ ಕೌಶಲ್ಯ ನೀಡುವ ಪ್ರಯೋಗಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಕೊಪ್ಪಳ ಮತ್ತು ದಾಂಡೇಲಿಯಲ್ಲಿರುವ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ಸುತ್ತಲಿನ ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಇಂಟರ್ನಿಶಿಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿ ಟಿ ಯು ಉದ್ದೇಶ ಕೇವಲ ತರಬೇತಿ ನೀಡುವುದಲ್ಲ ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಇನ್ನೋವೇಟಿವ್ ಮತ್ತು ಸೃಜನಶೀಲ ಕೌಶಲಗಳನ್ನು ಗುರುತಿಸಿ ಹೊಸ ಐಡಿಯಾಗಳಿಗೆ ಮೂರ್ತರೂಪವನ್ನು ಕೊಟ್ಟು ಹೊಸ ಪ್ರಾಡಕ್ಟ್ ಅಥವಾ ತಮ್ಮದೆ ಸ್ಟಾರ್ಟ ಅಪ್ ಆರಂಭಿಸಲು ವಿ ಟಿ ಯು ವಿ. ಆರ್. ಐ. ಆಪ್. ಮುಖಾಂತರ ಉತ್ತೇಜನ್ ನೀಡಲಿದೆ ಮತ್ತು ಈ ವರ್ಷ ಕನಿಷ್ಠ 25 ಸ್ಟಾರ್ಟ ಅಪ್ ಗಳನ್ನು ಹುಟ್ಟುಹಾಕುವ ಗುರಿಯನ್ನು ಇಟ್ಟುಕೊಂಡಿದೆ ಎಂದು ತಿಳಿಸಿದರು. ಇದಕ್ಕೆ ನೆರವಾಗುವ ರೀತಿಯಲ್ಲಿ ವಿ ಟಿ ಯು ನಲ್ಲಿ ಔದ್ಯೋಗಿಕ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಚಿಂತನ-ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸೆಲ್ಕೊ ಫೌಂಡೇಶನ್ ನ ಶ್ರೀಲಕ್ಷ್ಮಿ ಉನ್ನಿ, ಟೈ ಬೆಂಗಳೂರಿನ ಶ್ರೀ ಮದನ ಫಡಕಿ, ವಾದ್ವಾನಿ ಫೌಂಡೇಶನ್ ನ ಸಂಗಮಿತ್ರಾ ಭಾಸಿನ ಮತ್ತು KDEM ವಿಭಾಗಿಯ ಮುಖ್ಯಸ್ಥ ಶ್ರೀ ವೆಂಕಟೇಶ ಪಾಟೀಲ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಪ್ರೊ ಬಿ ಈ ರಂಗಸ್ವಾಮಿ ಸ್ವಾಗತಿಸಿದರು, ಮೌಲ್ಯಮಾಪನ ಕುಲಸಚಿವರಾದ ಪ್ರೊ ಟಿ ಎನ್ ಶ್ರೀನಿವಾಸ ವಂದಿಸಿದರು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟೆ ಬೆಳಗಾವಿ ಜಿಲ್ಲೆಗಳಿಂದ ಸುಮಾರು 250 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ