ಪ್ರಗತಿವಾಹಿನಿ ಸುದ್ದಿ, ಖಾನಾಪುರ: 4-5 ದಿನಗಳ ಹಿಂದೆಯಷ್ಟೇ ಜನಿಸಿದ ನವಜಾತ ಹೆಣ್ಣು ಶಿಶುವೊಂದು ಮಂಗಳವಾರ ಮುಂಜಾನೆ ಪಟ್ಟಣದ ತಹಸೀಲ್ದಾರ್ ಕಚೇರಿ ಕಂಪೌಂಡ್ ಬಳಿ ಪತ್ತೆಯಾಗಿದೆ.
ತಮಗೆ ಹೆಣ್ಣು ಹುಟ್ಟಿತೆಂದು ಬೇಸರಗೊಂಡ ಶಿಶುವಿನ ಪಾಲಕರು ನಸುಕಿನ ಜಾವ ಶಿಶುವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ತಂದು ಕಂಪೌಂಡ್ ಬಳಿ ಇಟ್ಟುಹೋಗಿರುವ ಶಂಕೆಯಿದ್ದು, ಬೆಳಗ್ಗೆ ಈ ಮಾರ್ಗವಾಗಿ ವಾಯುವಿಹಾರಕ್ಕೆ ಹೊರಟ ಕೆಲವರು ಬಟ್ಟೆ ಅಲುಗಾಡುತ್ತಿದ್ದುದನ್ನು ಗಮನಿಸಿದ್ದಾರೆ.
ಬಳಿಕ ಸ್ಥಳೀಯರ ಉಪಸ್ಥಿತಿಯಲ್ಲಿ ಬಟ್ಟೆ ತೆಗೆದು ನೋಡಿದಾಗ ಅದರಲ್ಲಿ ಮಗು ಇರುವುದು ತಿಳಿದು ಬಂದಿದೆ. ಈ ಸಂಗತಿಯನ್ನು ಸ್ಥಳೀಯರು ಪೊಲೀಸರು, ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಶಿಶುವಿನ ಆರೋಗ್ಯ ಪರೀಕ್ಷಿಸಿ ಅದನ್ನು ಜಿಲ್ಲಾ ಮಕ್ಕಳ ಪಾಲನಾ ಕೇಂದ್ರಕ್ಕೆ ರವಾನಿಸಲಾಗಿದೆ.
ಶಿಶು ಆರೋಗ್ಯವಾಗಿದ್ದು, ಶಿಶುವನ್ನು ಅನಾಥವಾಗಿ ತಂದು ಬಿಟ್ಟ ಘಟನೆಯ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ.
12ಖಾನಾಪುರ2
ಖಾನಾಪುರ ತಹಸೀಲ್ದಾರ್ ಕಚೇರಿ ಬಳಿ ಮಂಗಳವಾರ ಪತ್ತೆಯಾದ ನವಜಾತ ಶಿಶು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ