ಶಿರಸಿ ಗ್ರಾಮೀಣ ಪೊಲೀಸರಿಂದ ಕಾರ್ಯಾಚರಣೆ
ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಇಟಗುಳಿ ಗ್ರಾಮದ ಕಲ್ಕೊಪ್ಪ ಮಜಿರೆಯಲ್ಲಿ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್ ಎಂಬುವವರ ಮನೆಯ ಹಿಂಬದಿಯ ಕೊಠಡಿಯಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ಎಮ್ಮೆಯನ್ನು ಕಡಿದ ಆರೋಪದ ಮೇಲೆ 6 ಜನರನ್ನು ಬಂಧಿಸಲಾಗಿದೆ.
1, ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್ 2, ಅಬ್ದುಲ್ ಮಜಿದ್ ಅಬ್ದುಲ್ ಜಲೀಲ್ ಸಾಬ್ 3. ರಿಯಾಜ್ ಅಹ್ಮದ್ ನಜೀರ್ ಮಹಮ್ಮದ್ ಸಾಬ್ 4. ಹಭೀಬ ರೆಹಮಾನ್ ಮಹಮ್ಮದ್ ಸಾಬ್
5 ಅನ್ಸಾರ್ ನಜೀರ್ ಮಹಮ್ಮದ್ ಸಾಬ್ 6. ಅಬ್ದುಲ್ ಶುಕೂರ್ ಇಸ್ಮಾಯಿಲ್ ಸಾಬ್ ಎಲ್ಲರೂ ಇಟಗುಳಿ ಗ್ರಾಮದ ಕಲ್ಕೊಪ್ಪ ಮಜಿರೆಯವರು.
ಇವರನ್ನು ದಿನಾಂಕ 01/10/ 2021 ರಂದು ಮುಂಜಾನೆ ದಾಳಿ ಮಾಡಿ ಬಂಧಿಸಿದ ಪೊಲೀಸರು ಆರೋಪಿತ ರಿಂದ ಒಟ್ಟು 90 ಕೆಜಿ 64 ಗ್ರಾಂ ಎಮ್ಮೆಯ ಮಾಂಸವನ್ನು, ನೆಲಕ್ಕೆ ಹಾಸಿದ ತಾಡಪತ್ರೆ, ಕಟ್ಟಿಗೆಯ ಕೊಡ್ಡ, ಸತ್ತೂರ 2, ಚೂರಿ 1, ಡ್ರ್ಯಾಗರ್ 1, ತೂಕಮಾಡುವ ತೂಕದ ಯಂತ್ರ-1, ಪ್ಲಾಸ್ಟಿಕ್ ಬುಟ್ಟಿ 1 ಇತ್ಯಾದಿ ಸೇರಿದಂತೆ ಸುಮಾರು 20,410/-ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ 99/2021, ಕಲಂ 4, 12(1)) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 20 20 ಮತ್ತು ಕಲಂ 149 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಐಪಿಎಸ್ ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬಧರೀನಾಥ ಹಾಗೂ ಪೊಲೀಸ್ ಉಪಾಧಿಕ್ಷಕ ರವಿ ಡಿ ನಾಯ್ಕ ಶಿರಸಿ ಉಪವಿಭಾಗ, ಶಿರಸಿ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್ ಇವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಈರಯ್ಯ ಡಿಎನ್ ರವರ ನೇತೃತ್ವದಲ್ಲಿ ಎಎಸ್ಐ ರಮೇಶ್ ನಾಯಕ್ ಸಿಬ್ಬಂದಿಗಳಾದ ಮಹಾದೇವ ನಾಯ್ಕ, ಪ್ರದೀಪ್ ರೇವಣಕರ್, ಗಣಪತಿ ನಾಯ್ಕ, ಚೇತನ್ ಜೆಎನ್, ಮಹದೇವ್ ನೀರೊಳ್ಳಿ, ಯಲ್ಲಪ್ಪ ಪೂಜಾರಿ, ಸುನಿಲ್ ಹಡಲಗಿ, ರಾವ್ ಸಾಹೇಬ್ ಕಿತ್ತೂರ್, ರಮೇಶ್ ಮುಚ್ಚಂಡಿ, ಲಕ್ಷ್ಮಪ್ಪ ವಾಲಿಕರ್ ಇವರು ದಾಳಿ ಮಾಡಿ ಆರೋಪಿತಗಳನ್ನು ಬಂಧಿಸಿದ್ದಾರೆ.
ತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ