Kannada NewsKarnataka News

ದೇವಲತ್ತಿ ಗ್ರಾಮದೇವತೆ ಜಾತ್ರೆಗೆ ವಿದ್ಯುಕ್ತ ಚಾಲನೆ

ಪ್ರಗತಿವಾಹಿನಿ ಸುದ್ದಿ,  ಖಾನಾಪುರ: ತಾಲ್ಲೂಕಿನ ದೇವಲತ್ತಿ ಗ್ರಾಮದಲ್ಲಿ ಮಂಗಳವಾರದಿಂದ ಒಂಭತ್ತು ದಿನಗಳ ಕಾಲ ಜರುಗಲಿರುವ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಮಂಗಳವಾರ ನಸುಕಿನ ಜಾವದ ಬ್ರಾಹ್ಮೀ ಮುಹೂರ್ತದಲ್ಲಿ ಜರುಗಿದ ದೇವಿಯ ವಿವಾಹ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಿಯ ಭಕ್ತರ ದಂಡು ಗ್ರಾಮದಲ್ಲಿ ನೆರೆದಿತ್ತು.
ವಿವಾಹದ ಬಳಿಕ ಇಡೀ ದಿನ ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ದೇವಿಯ ಹೊನ್ನಾಟ ನಡೆಯಿತು. ಜಾತ್ರಾ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಗ್ರಾಮದಲ್ಲಿ ಸಾಗಿದ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಭಂಡಾರವನ್ನು ಎರಚಿ ಸಂಭ್ರಮಿಸಿದರು. ಇಡೀ ಗ್ರಾಮದ ಬೀದಿಗಳು, ರಸ್ತೆಗಳು, ದೇವಾಲಯಗಳು ಸಂಪೂರ್ಣ ಭಂಡಾರಮಯವಾಗಿ ಹಳದಿ ಬಣ್ಣದಿಂದ ಕಂಗೊಳಿಸಿದವು.

Related Articles

Back to top button