
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಮಾ.೧೫ ರಂದು ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೧೦-೪೫ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮಧ್ಯಾಹ್ನ ೧೨ ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಬೆಳಗಾವಿ ನಗರದ ಆಟೋನಗರ (ಆರ್.ಟಿ.ಓ ಮೈದಾನ) ಹತ್ತಿರ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿ, ಬೆಂಗಳೂರು ಇವರ ವತಿಯಿಂದ ಆಯೋಜಿಸಿರುವ ಮಹಾಮಂಡಳದ ಬೆಳಗಾವಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ನಂತರ ಅಲ್ಲಿಂದ ಮಧ್ಯಾಹ್ನ ೩ ಗಂಟೆಗೆ ರಸ್ತೆ ಮೂಲಕ ಧಾರವಾಡ ಜಿಲ್ಲೆಯ ಧಾರವಾಡ ಅತಿಥಿಗೃಹಕ್ಕೆ ಆಗಮಿಸುವರು. ಸಂಜೆ ೦೪-೩೦ ಗಂಟೆಗೆ ಅತಿಥಿ ಗೃಹದಿಂದ ಬ್ಯಾಂಕ್ ರಸ್ತೆಯಲ್ಲಿರುವ ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ, ಧಾರವಾಡ ಇವರ ವತಿಯಿಂದ ಆಯೋಜಿಸಿರುವ ರಡ್ಡಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಹಾಗೂ ಪ್ರಧಾನ ಕಛೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಹಾಗೂ ಕೆ.ಹೆಚ್. ಪಾಟೀಲ ಹಾಗೂ ಬ್ಯಾಂಕಿನ ಸಂಸ್ಥಾಪಕರಾದ ಎಫ್.ಟಿ. ನಲವಡಿ ಅವರ ಪುತ್ಥಳಿಗಳ ಅನಾವರಣ ಕಾರ್ಯಕ್ರಮದಲ್ಲಿ ಭಾಗಹಿಸುವರು.
ಸಂಜೆ ೬-೧೫ ಗಂಟೆಗೆ ಧಾರವಾಡದಿಂದ ನಿರ್ಗಮಿಸಿ ೬-೪೫ ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಂಜೆ ೭ ಗಂಟೆಗೆ ಸ್ಟಾರ್ ಏರ್ ವಿಮಾನದ ಮೂಲಕ ಮರಳಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ