Kannada NewsKarnataka NewsPolitics

*ದೇವೇಗೌಡ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತ ಗಂಭೀರವಾಗಿದೆ.

ಪ್ರಸ್ತುತ ಐಸಿಯುನಲ್ಲಿ ಚೆನ್ನಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. 80 ವರ್ಷ ದಾಟಿರುವ ಅವರಿಗೆ ಎದೆ ನಿರುದ್ಧತೆ ಮತ್ತು ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಆಸ್ಪತ್ರೆಗೆ ಸೇರಿದ್ದರು.

Home add -Advt

ಡಾ. ಸತ್ಯನಾರಾಯಣ ಮೈಸೂರು ಮತ್ತು ಡಾ. ಸುನಿಲ್ ಕಾರಂತ್ ಅವರ ನೇತೃತ್ವದ ತಜ್ಞ ವೈದ್ಯರ ಮಲ್ಟಿಸ್ಪೆಷಾಲಿಟಿ ತಂಡವು ಅವರಿಗೆ ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದೆ.

ಪತ್ನಿಯ ಆರೋಗ್ಯದ ಸ್ಥಿತಿ ತಿಳಿಯಲು ಮಾಜಿ ಪ್ರಧಾನಿ ದೇವೇಗೌಡರು ಪದ್ಮನಾಭನಗರದ ನಿವಾಸದಿಂದ ಆಸ್ಪತ್ರೆಗೆ ಬಂದಿದ್ದಾರೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೂ ಕೂಡ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಿಖಿಲ ಕುಮಾರಸ್ವಾಮಿ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.

10 ಗಂಟೆ ನಂತರ ಆಸ್ಪತ್ರೆ ಹೆಲ್ತ್ ಬುಲಿಟನ್ ಬಿಡುಗಡೆ ಮಾಡಲಿದೆ.

Related Articles

Back to top button