- ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಸ್ತಮರ್ಡಿ, ಬಸರೀಕಟ್ಟಿ ಹಾಗೂ ತಾರಿಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ 1.18 ಕೋಟಿ ರೂ,ಗಳನ್ನು ಬಿಡುಗಡೆ ಮಾಡಿಸಿದ್ದು, ಭಾನುವಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾಸ್ತಮರ್ಡಿ ಗ್ರಾಮದಲ್ಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಮಯದಲ್ಲಿ ಅಶೋಕ ತೋರ್ಲಿ, ಪ್ರಕಾಶ ಪಾಟೀಲ, ಸಂತೋಷ ಮಡ್ಡೆಪ್ಪಗೋಳ, ಯಲ್ಲಪ್ಪ ತೋರ್ಲಿ, ಮಹಾಂತವ್ವ ಮರಕಟ್ಟಿ, ಶ್ರೀಶೈಲ್ ಪಾಟೀಲ, ಸುರೇಶ ಪಾಟೀಲ, ವಿಜಯ ಪಾಟೀಲ, ಬಾಬು ತೋರ್ಲಿ, ಬಸವರಾಜ ಕೋಲಕಾರ, ಈರಪ್ಪ ಮಠಾರಿ, ರಾಘವೇಂದ್ರ ಮಾವಿನಕಟ್ಟಿ, ಚಂದ್ರು ಜಂಗ್ಲಿ, ಮಾರುತಿ ಚೌಗುಲಾ, ಶಿವರಾಯ ಬರಣಿ, ಮಹಾಂತೇಶ ಪಾರಿಶ್ವಾಡ್ ಮುಂತಾದವರು ಉಪಸ್ಥಿತರಿದ್ದರು.
ನಂತರ ಶೆಗಣಮಟ್ಟಿ ಗ್ರಾಮದೊಳಗಿನ ರಸ್ತೆಗಳ ನಿರ್ಮಾಣದ ಸಲುವಾಗಿ 20 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿಸಲಾಗಿದ್ದು, ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಸಹ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆಯನ್ನುನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಂತೋಷ ಅಷ್ಟೇಕರ್, ವಿಶ್ವನಾಥ ಕಿಲಿಕೇತರ್, ಮಹಾವೀರ ಪಾಟೀಲ್, ಪಾರಿಶ್ ಪಾಟೀಲ, ಸಂತು ಸನದಿ, ಗುಂಡು ದೇಸಾಯಿ, ರಫಿಕ್ ಸನದಿ, ರಾಜು ಪಾಟೀಲ, ಸುಭಾಷ ಪಾಟೀಲ, ಹನುಮಂತ ಪಾಟೀಲ, ಫಕೀರ್ ಪಾಟೀಲ, ನಾಗೇಶ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.
56 ಲಕ್ಷ ರೂ. ವೆಚ್ಚದಲ್ಲಿ ಹಲಗಾ ಗ್ರಾಮದ ರಸ್ತೆಗಳ ಅಭಿವೃದ್ಧಿ
https://pragati.taskdun.com/at-cost-of-56-lakh-rs-development-of-roads-in-halaga-village/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ