
ಮತ್ತೆ 3 ರಸ್ತೆ ಅಭಿವೃದ್ಧಿಗೆ ಸೋಮವಾರ ಚಾಲನೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳು ಸಾಲು ಸಾಲಾಗಿ ಮುಂದುವರಿದಿವೆ. ಇದಕ್ಕೆ ಇಂದು ಮತ್ತೆ 3 ರಸ್ತೆಗಳ ಅಭಿವೃದ್ಧಿ ಯೋಜನೆಗಳು ಸೇರ್ಪಡೆಗೊಂಡಿವೆ.
ಸೋಮವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರ 3 ರಸ್ತೆಗಳ ಅಭಿವೃದ್ಧಿಗೆ ಪೂಜೆ ನೆರವೇರಿಸಿದರು. ಬಹು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಗುತ್ತಿರುವುದಕ್ಕೆ, ದಶಕಗಳ ನಂತರ ತಮ್ಮೂರು ಅಭಿವೃದ್ಧಿ ಕಾಣುತ್ತಿರುವುದಕ್ಕೆ ಜನರು ಹರ್ಷಗೊಂಡಿದ್ದಾರೆ.
75 ಲಕ್ಷ ರೂ. ವೆಚ್ಚ
ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಒಟ್ಟು 75 ಲಕ್ಷ ರೂ,ಗಳ ವೆಚ್ಚದಲ್ಲಿ ಮಾಸ್ತಮರ್ಡಿ ಗ್ರಾಮದಿಂದ ತಾರೀಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಕ್ಕ ನಾಯಕ, ಸದಸ್ಯರಾದ ಯಲ್ಲಪ್ಪ ಗ್ವೌಂಡಾಡಕರ, ನಾಮದೇವ ಜೋಗನ್ನವರ, ಗೀತಾ ತಳವಾರ, ಗೀತಾ ಮುಚ್ಚಂಡಿ, ಪ್ರಮೋದ್ ಜಾಧವ್, ಬಸವಂತ ಕುಂದರಗಿ, ರುದ್ರಪ್ಪ ತಾರೀಹಾಳ, ಬಸವರಾಜ ನಾಯ್ಕ, ಕಾಂಗ್ರೆಸ್ ಮುಖಂಡರಾದ ಸೂರ್ಯ ಜಿ ಜಾಧವ್, ರಾಜು ಜಾಧವ, ಯಲ್ಲಪ್ಪ ಥೋರಲಿ, ಬಾಳಪ್ಪ ಕುರಂಗಿ, ರಾಯಪ್ಪ ತವಗದ, ನಾಗಲಿಂಗ ಬಡಿಗೇರ, ಕಲ್ಮೆಶ ಪಾರ್ವತಿ, ಅಡಿವೆಪ್ಪ ರಾಗೀಪಾಟೀಲ, ಅನಿಲ ಪೂಜಾರಿ, ಶಿವನಪ್ಪ ಪಾಟೀಲ, ನಾಗಪ್ಪ ತಳವಾರ, ಕಿರಣ್ ರಾಗೀಪಾಟೀಲ, ಮಾರುತಿ ಜಂಗಳಿ ಮೊದಲಾದವರು ಉಪಸ್ಥಿತರಿದ್ದರು.
2.82 ಕೋಟಿ ರೂ. ವೆಚ್ಚ

ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯ ಅನುದಾನದಲ್ಲಿ ಒಟ್ಟು 2.82 ಕೋಟಿ ರೂ,ಗಳ ವೆಚ್ಚದಲ್ಲಿ ತಾರೀಹಾಳ ಗ್ರಾಮದಿಂದ ಹಿರೇಬಾಗೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.

45 ಲಕ್ಷ ರೂ. ವೆಚ್ಚ
ಗಣಿ ಮಾತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಸುಮಾರು 45 ಲಕ್ಷ ರೂ,ಗಳ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ. 4 ರಿಂದ ಬಡೇಕೊಳ್ಳಿ ಮಠ್ (ಸಿದ್ದನಭಾವಿ) ವರೆಗೆ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಚಾಲನೆ ನೀಡಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ