Latest

ರಾಜಿನಾಮೆ ನಿರ್ಧಾರ ಪ್ರಕಟಿಸಿದ ದೇವೇಂದ್ರ ಫಡ್ನವೀಸ್

ಪ್ರಗತಿವಾಹಿನಿ ಸುದ್ದಿ, ಮುಂಬೈ– ಶನಿವಾರವಷ್ಟೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ರಾಜಿನಾಮೆ ನಿರ್ಧಾರ ಪ್ರಕಟಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜಿನಾಮೆ ನೀಡುವುದಾಗಿ ತಿಳಿಸಿದರು.

ಮಹಾರಾಷ್ಟ್ರದಲ್ಲಿ 105 ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿಗೆ ಜನಾದೇಶವಿತ್ತು. ಆದರೆ ಶಿವಸೇನೆ ಚುನಾವಣೆ ಪೂರ್ವ ಮೈತ್ರಿಯನ್ನೇ ಧಿಕ್ಕರಿಸಿ ನಮ್ಮ ಜೊತೆಗೆ ಚೌಕಶಿಗಿಳಿಯಿತು. ನಾವೂ ಸಾಕಷ್ಟು ಕಾದು ಅಂತಿಮವಾಗಿ ಸರಕಾರ ರಚನೆಯ ನಿರ್ಧಾರ ಕೈಬಿಟ್ಟಿದ್ದೆವು ಎಂದು ಫಡ್ನವೀಸ್ ಈವರೆಗಿನ ಬೆಳವಣಿಗೆಗಳನ್ನು ವಿವರಿಸಿ ಅಂತಿಮವಾಗಿ ತಾವು ರಾಜಿನಾಮೆ ನೀಡುವುದಾಗಿ ಪ್ರಕಟಿಸಿದರು.

ಇದಕ್ಕೂ ಸ್ವಲ್ಪ ಹೊತ್ತಿಗೆ ಮೊದಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜಿನಾಮೆ ನೀಡಿದ್ದರು.

Home add -Advt

ಅಜಿತ್ ಪವಾರ್ ಅವರನ್ನು ನಂಬಿ ಬಿಜೆಪಿ ಎಡವಿತಾ ಎನ್ನುವ ಸಂಶಯ ಮೂಡಿದ್ದು, ಅಜಿತ್ ಪವಾರ್ ಅವರ ವಿರುದ್ಧ ಇದ್ದ ಸುಮಾರು 70 ಸಾವಿರ ಕೋಟಿ ರೂ. ಹಗರಣಗಳ ಪ್ರಕರಣವನ್ನು ಎಸಿಬಿಯಿಂದ ಹಿಂದಕ್ಕೆ ಪಡೆಯುವ ಸಲುವಾಗಿ ಅಜಿತ್ ಪವಾರ್ ನಾಟಕ ಮಾಡಿದರಾ ಎನ್ನುವ ಪ್ರಶ್ನೆ ಮೂಡಿದೆ.

ಈ ಹಿಂದೆ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಮುಂಚಿತವಾಗಿ ರಾಜಿನಾಮೆ ನೀಡಿದ್ದ ಮಾದರಿಯೇ ಮಹಾರಾಷ್ಟ್ರದಲ್ಲಿ ಮರುಕಳಿಸಿದಂತಾಗಿದೆ.

ಮಹಾರಾಷ್ಟ್ರ ರಾಜಕೀಯ ಅಯೋಮಯ

ದೇಶದ ಇತಿಹಾಸದಲ್ಲೇ ಬಿಗ್ ಡ್ರಾಮಾ: ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸರಕಾರ

ಅಬ್ಬಾ, ರಾತ್ರೋರಾತ್ರಿ ಏನೆಲ್ಲ ನಡೆಯಿತು!

Related Articles

Back to top button