ಪ್ರಗತಿವಾಹಿನಿ ಸುದ್ದಿ: ಕನ್ವರಿಯಾ ಯಾತ್ರಾ ಮಾಡುತ್ತಿದ್ದ ಭಕ್ತರ ಮೇಲೆ ವಾಗನ ಹರಿದಿದ್ದು, ನಾಲ್ವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವರದಿಯ ಪ್ರಕಾರ, ಎಲ್ಲಾ ಕನ್ವರಿಯಾಗಳು ಸುಲ್ತಂಗಂಜ್‌ನಿಂದ ಗಂಗಾಜಲವನ್ನು ತೆಗೆದುಕೊಂಡು ಜಸ್ತ್ ಗೌರ್ ನಾಥ್ ಮಹಾದೇವ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಪ್ಪು ಬಣ್ಣದ ಎಸ್ ಯುವಿ ಕಾರು ನೇರವಾಗಿ ಕನ್ವರಿಯಾಗಳ ಮೇಲೆ ಹರಿದಿದೆ. ಈ ಘಟನೆಯಲ್ಲಿ ಸುಮಾರು 10 – 11 ಜನರು ಗಾಯಗೊಂಡಿದ್ದು, ನಾಲ್ವರು ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಕೂಡಲೇ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾತ್ರಿ 8:30 ರ ಸುಮಾರಿಗೆ ಫುಲ್ಲಿಡುಮಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರಡಿಕ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ