
ಪ್ರಗತಿವಾಹಿನಿ ಸುದ್ದಿ: ಕ್ರೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ತ್ತುವರಿ ಆರೋಪ ಕೇಳಿಬಂದಿದ್ದು, ಸರ್ಕಾರದ ನಡೆ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸರ್ಕಾರ ಒತ್ತುವರಿ ತೆರವಿಗೆ ಮುಂದಾಗಿದೆ.
ಕೇತಗಾನಹಳ್ಳಿಯ ತೋಟದ ಮನೆ ಬಳಿ ಸರ್ವೆ ನಂ.7, 8, 9, 10, 16, 12, 79ರಲ್ಲಿ 16 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈಗಾಗಲೇ ಕಂದಾಯ ಇಲಾಖೆ, ಸರ್ವೆ ಇಲಾಖೆ ಜಂಟಿ ಸರ್ವೆ ನಡೆಸಿತ್ತು. ಇದೀಗ ಒತ್ತುವರಿಯಾಗಿರುವ ಜಮೀನು ತೆರವು ಮಾಡಲು ಮುಂದಾಗಿದೆ.
ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ತೋಟದ ಮನೆ ಬಖಿ ಜೆಸಿಬಿ ಹಾಗೂ ಅಧಿಕಾರಿಗಳು ಬೀಡುಬಿಟ್ಟಿದ್ದು, ತೆರವಿಗೆ ಮುಂದಾಗಿದ್ದಾರೆ.