
ಧನುಮಡ್ಡಿ

ಬೇಕಾದ ಸಾಮಗ್ರಿಗಳು:
ದೋಸೆಅಕ್ಕಿ 1 ಕಪ್, ಹೆಸರು ಬೇಳೆ1 ಕಪ್, ಜೀರಿಗೆ 2 ಚಮಚ, ಉದ್ದಿನ ಬೇಳೆ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಅರಿಶಿಣ ಪುಡಿ
ಮಾಡುವ ವಿಧಾನ:
ಅಕ್ಕಿ ಮತ್ತು ಹೆಸರು ಬೇಳೆಯನ್ನು ಪ್ರತ್ಯೇಕವಾಗಿ ಚೆನ್ನಾಗಿ ಹುರಿಯಬೇಕು. ಜೀರಿಗೆ ಮತ್ತು ಉದ್ದಿನ ಬೇಳೆಯನ್ನು ಹುರಿದು ಹಿಟ್ಟು ಮಾಡಿಕೊಳ್ಳಬೇಕು. ಹುರಿದ ಅಕ್ಕಿ ಮತ್ತು ಹೆಸರುಬೇಳೆಯನ್ನು ತೊಳೆದು 6 ಕಪ್ ನೀರು ಸೇರಿಸಬೇಕು. ಹಾಗೆ ಉಪ್ಪು, ಜೀರಿಗೆ, ಉದ್ದಿನ ಪುಡಿ, ಅರಿಶಿಣ ಪುಡಿ ಸೇರಿಸಿ ಕುಕ್ಕರಿನಲ್ಲಿ 5 ರಿಂದ 6 ಸೀಟಿ ಹಾಕಿಸಬೇಕು.
ಬಿಸಿ ಬಿಸಿ ಧನಮಡ್ಡಿಯ ಜೊತೆ ತುಪ್ಪ ಹಾಕಿ ಸವಿಯಬೇಕು. ಹಾಗೆ ಹುಣಸೆ ಹಣ್ಣಿನ ಗೊಜ್ಜು ಇದರ ಜೊತೆ ತುಂಬಾ ಒಳ್ಳೆಯ ರುಚಿಯನ್ನು ಕೊಡುತ್ತದೆ.
(ಸ್ಟೀಮ್ ರೈಸ್ ಇದಕ್ಕೆ ಬರುವುದಿಲ್ಲ, ಯಾವುದೇ ರಾ ರೈಸ್ ನ್ನು ಬಳಸಬಹುದು)
ಹುಣಸೆ ಹಣ್ಣಿನ ಗೊಜ್ಜು:
ಹುಣಸೆ ಹಣ್ಣು 100ಗ್ರಾಂ, ಬೆಲ್ಲ 50 ಗ್ರಾಂ, ಮೆಣಸಿನ ಹಿಟ್ಟು 2 ಚಮಚ( ಅಥವಾ ಸೂಜಿ ಮೆಣಸು ಅರ್ಧ ಚಮಚ) ರುಚಿಗೆ ತಕ್ಕಷ್ಟು ಉಪ್ಪು.ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ಉಪ್ಪು ಬೆಲ್ಲ ಮೆಣಸನ್ನು ಸೇರಿಸಿ ರುಬ್ಬ ಬೇಕು. ಸ್ವಲ್ಪ ನೀರು ಸೇರಿಸಿ ಕುದಿಸಬೇಕು ಕುದಿಯುವಾಗ ಸ್ವಲ್ಪಜೀರಿಗೆ ಉದ್ದಿನ ಹಿಟ್ಟನ್ನು ಇದಕ್ಕೆ ಸೇರಿಸಬಹುದು.(ಹೊಸಹುಣಸೆ ಹಣ್ಣು ಮತ್ತು ಸೂಜಿ ಮೆಣಸನ್ನು ಬಳಸಿದರೆ ರುಚಿ ಚೆನ್ನಾಗಿ ಬರುತ್ತದೆ)
-ಸಹನಾ ಭಟ್
ಸಹನಾಸ್ ಕಿಚನ್