Kannada NewsKarnataka News

ಧರ್ಮಸ್ಥಳ ಯೋಜನೆಯು ಜನರ ಮನಸಿನಲ್ಲಿ ಶಾಶ್ವತ – ಶಾಸಕ ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಬೆಳಗಾವಿ ಜಿಲ್ಲೆಯಲ್ಲಿ ಧರ್ಮಸ್ಥಳ ಯೋಜನೆ ಪ್ರಾರಂಭವಾಗಿ ೧೨ ವರ್ಷ ಕಳೆದಿದ್ದು ಈ ಸಂದರ್ಭದಲ್ಲಿ ಅನೇಕ ಸರ್ಕಾರೇತರ ಸಂಘ ಸಂಸ್ಥೆಗಳು ಬಂದು ಹೋಗಿವೆ. ಆದರೆ ಧರ್ಮಸ್ಥಳ ಯೋಜನೆಯು ಜನಪರ ಕೆಲಸದಿಂದ ಜನರ ಮನಸಿನಲ್ಲಿ ಶಾಶ್ವತವಾಗಿ ಉಳಿದಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಸಭಾಗ, ಸಾಮೂಹಿಕ ಸತ್ಯನಾರಾಣಪೂಜಾ ಸಮಿತಿ ಹಲಗ ಹಾಗೂ ಕಪಿಲೇಶ್ವರ ವಲಯಗಳ ಸಹಯೋಗದಲ್ಲಿ ಜಯಶಂಕರ ಸಭಾ ಭವನದಲ್ಲಿ ನಡೆದ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆ ಪ್ರಾರಂಭವಾದ ದಿನದಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಹೆಣ್ಣು ಸದೃಢವಾದರೆ ಮನೆ ಸದೃಢವಾಗುತ್ತದೆ. ಮನೆ ಸದೃಢ ವಾದರೆ ಊರು ಸದೃಢವಾಗಲಿದೆ. ಇದರಿಂದ ಪೂಜ್ಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆಯೊಂದಿಗೆ, ಪೂಜಾ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಜಾಗೃತಿ ಮೂಢಿಸುತ್ತಿದ್ದಾರೆ. ಪೂಜ್ಯರು ಮಾಡುವ ಸಾಮಾಜಿಕ ಕೆಲಸವನ್ನು ಬೇರೆ ಯಾರೂ ಮಾಡುತ್ತಿಲ್ಲ, ಅದಕ್ಕಾಗಿ ದೇಶದ ಪ್ರಧಾನಿಯವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದ್ದು, ಇದರಿಂದ ರಾಜ್ಯಸಭೆ ಘನತೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಪ್ರದೀಪ ಶೆಟ್ಟಿಯವರು ಆಧುನಿಕ ಜೀವನ ಶೈಲಿಯಲ್ಲಿ ಜನರ ಶಿಕ್ಷಣ, ಹಣ ಎಲ್ಲಾ ಇದೆ. ಆದರೆ ದೇವರ ದಯೆ ಇಲ್ಲ. ಧಾರ್ಮಿಕ ಭಾವನೆ, ಸಂಸ್ಕಾರ ಕಡಿಮೆಯಾದ್ದರಿಂದ ವೃದ್ಧಾಶ್ರಮ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಪೂಜ್ಯರು ಧಾರ್ಮಿಕ ಜಾಗೃತಿ ಮೂಡಿಸುವ ಸಾಮೂಹಿಕ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ದಿನ ೧೦೮ ಜೋಡಿಗಳು ಪೂಜೆ ನಡೆಸಿರುವುದು ಬೆಳಗಾವಿ ಜಿಲ್ಲೆಯ ಸಂಘಗಳ ಭಕ್ತಿ, ಶಿಸ್ತಿಗೆ ಹಿಡಿದ ಕನ್ನಡಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ೫೫೦೦೦ ಸಂಘಗಳಿವೆ. ಸಂಘಗಳಿಗೆ ಗುಣಮಟ್ಟದ ಸೇವೆ ನೀಡಲು ಜಿಲ್ಲೆಯನ್ನು ೪ ಜಿಲ್ಲಾ ಕಚೇರಿಯಾಗಿ ವಿಂಗಡಿಸಲಾಗಿದೆ. ಬೆಳಗಾವಿ ತಾಲ್ಲೂಕನ್ನು ೩ ತಾಲೂಕು ಕಚೇರಿಗಳಾಗಿ ವಿಂಗಡಿಸಿ ಸದಸ್ಯರಿಗೆ ಮನೆಬಾಗಿಲಿಗೆ ಯೋಜನೆ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತಾರಿಹಾಳ ಅಡವಿ ಸಿದ್ಧೇಶ್ವರ ಮಠದ  ಶ್ರೀ ಅಡವೀಶ್ವರ ದೇವರು ವಹಿಸಿದ್ದರು. ನಗರ ಸೇವಕರಾದ ಜಯಂತ ಜಾಧವ, ಸಂತೋಷ ಪೇಡನೇಕರ, ಜಿಲ್ಲಾ ಜನಜಾಗೃತಿ ಸದಸ್ಯರಾದ ಬಸವರಾಜ ಸೊಪ್ಪಿನಮಠ, ರಾಜು ಬೆಲ್ಲದ,ರಾಜು ಮಿರ್ಜನ್ನವರ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಮಂಜುನಾಥ ಎನ್ ಆರ್ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥ ನಿರೂಪಿಸಿದರು, ಮೇಲ್ವಿಚಾರಕಿ ರೇಣುಕಾ ವಂದಿಸಿದರು. ಮೇಲ್ವಿಚಾರಕ ಸೋಮಲಿಂಗ, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಕರ್ನಾಟಕ: ಮೇಲ್ವಿಚಾರಣೆಗೆ ಮುಖ್ಯಕಾರ್ಯದರ್ಶಿ ನೇತೃತ್ವದ ಗುಂಪು ರಚನೆ: ಸಿಎಂ ಬಸವರಾಜ ಬೊಮ್ಮಾಯಿ

https://pragati.taskdun.com/politics/karnataka-a-1-trillion-gdp-visionreport-releasecm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button