ಧಾರವಾಡದ ಹರಿಜನಕೇರಿ ಗುಡಿಯಲ್ಲಿ ಭಜನೆ ಹಾಡಿ ಭಕ್ತಿ ಸಮರ್ಪಣೆ
ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಥಾಪನೆಯ ಈ ಶುಭ ಸಂದರ್ಭದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ಭಕ್ತಿ ಪೂರ್ವಕವಾಗಿ ಹೀಗೆ ಶ್ರೀ ರಾಮನ ಭಜನೆಯಲ್ಲಿ ತಲ್ಲೀನರಾಗಿದ್ದರು.
*ರಾಮ ನಮೋ..ರಾಮ ನಮೋ..ರಾಮ ನಮೋ..ಶ್ರೀ ಕೃಷ್ಣ ನಮೋ..!
ರಾಮ ನಮೋ…ರಾಮ ನಮೋ.. ರಾಮ ನಮೋ ಶ್ರೀ ಕೃಷ್ಣ ನಮೋ…!!
ಅಯೋಧ್ಯ ವಾಸಿ ರಾಮ ನಮೋ…ಅಯೋಧ್ಯ ವಾಸಿ ರಾಮ ನಮೋ.. ಗೋಕುಲ ವಾಸಿ ಕೃಷ್ಣ ನಮೋ.. ಗೋಕುಲ ವಾಸಿ ಶ್ರೀ ಕೃಷ್ಣ ನಮೋ.. !!
ರಾಮ ನಮೋ..ರಾಮ ನಮೋ…ರಾಮ ನಮೋ ಶ್ರೀ ಕೃಷ್ಣ ನಮೋ..!
ದಶರಥ ನಂದನ ರಾಮ ನಮೋ..ದಶರಥ ನಂದನ ರಾಮ ನಮೋ..!ಯಶೋಧ ನಂದನ ಕೃಷ್ಣ ನಮೋ…ಯಶೋಧ ನಂದನ ಕೃಷ್ಣ ನಮೋ…!!
ರಾಮ ನಮೋ..ರಾಮ ನಮೋ..ರಾಮ ನಮೋ..ಶ್ರೀ ಕೃಷ್ಣ ನಮೋ.. !
ಸೀತಾ ವಲ್ಲಭ ರಾಮ ನಮೋ.. ಸೀತಾ ವಲ್ಲಭ ರಾಮ ನಮೋ…!ರಾಧಾ-ರಮಣ ಕೃಷ್ಣ ನಮೋ…ರಾಧಾ- ರಮಣ ಕೃಷ್ಣ ನಮೋ…!!
ರಾಮ ನಮೋ..ರಾಮ ನಮೋ.. ರಾಮ ನಮೋ ಶ್ರೀ ಕೃಷ್ಣ ನಮೋ..!* ಎಂದು ರಾಮನಾಮ ಹಾಡಿದರು.
ಧಾರವಾಡದ ಮಾಳಾಪುರ ಹರಿಜನ ಕೇರಿಯಲ್ಲಿ ಗುಡಿಗೆ ತೆರಳಿ ಸ್ಥಳೀಯರೊಂದಿಗೆ ಶ್ರೀ ರಾಮನ ಭಜನಾ ಸಪ್ತಾಹದಲ್ಲಿ ಭಾಗವಹಿಸಿ ಆರಾಧ್ಯ ದೈವ ಶ್ರೀ ರಾಮನಿಗೆ ಭಕ್ತಿ ಸಮರ್ಪಿಸಿದರು.
ಸಚಿವ ಜೋಶಿ ಅವರು ಥೇಟ್ ಭಜನಾ ತಂಡದ ನೇತಾರನಂತೆಯೇ ತಾಳ ಹಾಕುತ್ತ ಶ್ರೀ ರಾಮನ ಒಂದು ಭಜನೆ ಮಾಡುವ ಮೂಲಕ ರಾಮನನ್ನು ಸ್ತುತಿಸಿದರು.
ಸದಾ ಬಿಡುವಿಲ್ಲದ ಕೆಲಸ -ಕಾರ್ಯಗಳ ಮಧ್ಯೆಯೇ ಸಚಿವರು ದೇವಸ್ಥಾನದಲ್ಲಿ ಜನ ಸಾಮಾನ್ಯರಂತೆ ಕುಳಿತು ಭಜನೆ ಹಾಡಿದ್ದು ವಿಶೇಷ ಮತ್ತು ಅತ್ಯಾಕರ್ಷಕವಾಗಿತ್ತು.
ಸಚಿವರು ಭಜನೆಗೆ ತಾಳ ಹಾಕುತ್ತಲೇ ಅನುಭವಿ ಭಜನಾ ತಂಡದಂತೆ ಭಜನೆಗೈದ ಪರಿ ಕಂಡು ದೇವಸ್ಥಾನದಲ್ಲಿ ನೆರೆದ ಪ್ರೇಕ್ಷಕರೂ ದನಿಗೂಡಿಸಿ ಶ್ರೀರಾಮನನ್ನು ಪ್ರಸನ್ನ ಗೊಳಿಸಿದರು.
ರಾಮ ನಾಮ ಝೇಂಕಾರ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ವಿರಾಜಮಾನನಾಗುವ ಈ ಶುಭ ಸಂದರ್ಭದಲ್ಲಿ ದೇಶ ದೆಲ್ಲೆಡೆಯಂತೆ ಹುಬ್ಬಳ್ಳಿ – ಧಾರವಾಡ ಅವಳಿ ನಗರ ಮತ್ತು ಜಿಲ್ಲಾದ್ಯಂತ ಮಠ-ಮಂದಿರ, ಮನೆ-ಮನಗಳಲ್ಲಿ ರಾಮನಾಮ ಝೇಂಕರಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ