
ಚಿನ್ನಯ್ಯಗೆ ಬುರುಡೆ ಕೊಟ್ಟಿದ್ದೇ ಸೌಜನ್ಯಾ ಮಾವ
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ವಿವಿಧ ಸ್ಥಳಗಳಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿಕೆ ನೀಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಸದ್ಯ ಜೈಲು ಸೇರಿದ್ದಾನೆ. ಈ ನಡುವೆ ಎಸ್ ಐಟಿ ತನಿಖೆ ವೇಳೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬುರುಡೆ ಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲ ಗೌಡ ಎಂದು ತಿಳಿದುಬಂದಿದೆ. ಚಿನ್ನಯ್ಯ ಹಾಗೂ ವಿಠಲ ಗೌಡಗೆ ಹಳೆಯ ಸ್ನೇಹ. ನೇತ್ರಾವತಿ ನದಿ ತೀರದಲ್ಲಿ ಚಿಕ್ಕದಾದ ಹೋಟೆಲ್ ನಡೆಸುತ್ತಿದ್ದ ವಿಠಲ ಗೌಡ ಅವರ ಅಂಗಡಿಯಲ್ಲಿ ಚಿನ್ನಯ್ಯ ವಾಸವಾಗಿದ್ದ. ನದಿ ತೀರದಲ್ಲಿ ಭಕ್ತರು ಬಿಟ್ಟುಹೋಗಿದ್ದ ವಸ್ತುಗಳನ್ನು, ಮೃತದೇಹಗಳ ಪಕ್ಕದಲ್ಲಿ ಸಿಗುತ್ತಿದ್ದ ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತುಗಳು ಸಿಕ್ಕರೂ ವಿಠಲಗೌಡಗೆ ತಂದು ಕೊಡುತ್ತಿದ್ದನಂತೆ ಎಂದು ತಿಳಿದುಬಂದಿದೆ.
ಹೀಗೆ ಇಬ್ಬರೂ ಚಿರಪರಿಚಿತರಾಗಿದ್ದು, ಚಿನ್ನಯ್ಯಗೆ ಬುರುಡೆಯನ್ನು ತಂದುಕೊಟ್ಟಿದ್ದು ವಿಠಲಗೌಡ ಎಂಬುದು ಇದೀಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ವಿಠಲಗೌಡನನ್ನು ಎಸ್ ಐಟಿ ಬಂಧಿಸುವ ಸಾಧ್ಯತೆ ಇದೆ.