
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಮಾಸ್ಕ್ ಮ್ಯಾನ್ ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಾಸ್ಕ್ ಮ್ಯಾನ್ ತೋರಿದ 17 ಜಾಗಗಳಲ್ಲಿ ಎಸ್ ಐಟಿ ಅಧಿಕಾರಿಗಳು ಅಸ್ಥಿಪಂಜರಕ್ಕಾಗಿ ಶೋಧ ನಡೆಸಿದ ಬಳಿಕ ಮಾಸ್ಕ್ ಮ್ಯಾನ್ ನನ್ನು ಸುದೀರ್ಘ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಆತ ಹೇಳಿದ್ದು ಸುಳ್ಳು ಎಂಬುದು ಬಯಲಾಗಿದೆ. ತಾನು ಸುಳ್ಳು ಹೇಳಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಮ್ಯಾನ್ ನನ್ನು ಎಸ್ ಐಟಿ ಬಂಧಿಸಿದೆ.
ಇದೇ ವೇಳೆ ಮಾಸ್ಕ್ ಮ್ಯಾನ್ ಹೆಸರನ್ನು ಎಸ್ ಐಟಿ ಅಧಿಕಾರಿಗಳು ರಿವೀಲ್ ಮಾಡಿದ್ದಾರೆ. ಬಂಧಿತ ಮಾಸ್ಕ್ ಮ್ಯಾನ್ ಸಿ.ಎನ್.ಚಿನ್ನಯ್ಯ ಎಂದು ತಿಳಿದುಬಂದಿದೆ. ಬೆಳ್ತಂಗಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಮಾಸ್ಕ್ ಮ್ಯಾನ್ ನ್ನು ಇಂದು ಬೆಳಿಗ್ಗೆ 11 ಗಂಟೆಗೆ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದೆ.