Kannada NewsKarnataka NewsLatest
*ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಹೊಸ ಸ್ಥಳಗಳಲ್ಲಿ ಎಸ್ ಐಟಿಯಿಂದ ಅಸ್ಥಿಪಂಜರಕ್ಕಾಗಿ ಶೋಧ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಂದು ಎರಡು ಹೊಸ ಜಾಗಗಳಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ನಡೆಸಿದೆ.
ದೂರುದಾರ ತೋರಿಸಿರುವ 16ನೇ ಪಾಯಿಂಟ್ ಹಾಗೂ 16 ಎನಲ್ಲಿ ಎಸ್ ಐಟಿ ತಂಡ ಅಸ್ಥಿಪಂಜರಕ್ಕಾಗಿ ಶೋಧ ಕಾರ್ಯ ನಡೆಸಿದೆ. ದೂರುದಾರ ತೋರಿಸಿದ್ದ 13ನೇ ಪಾಯಿಂಟ್ ನಲ್ಲಿ ಶೋಧ ನಡೆಸುವುದನ್ನು ಕೈಬಿಟ್ಟು ಹೊಸ ಜಾಗಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಈ ಎರಡು ಜಾಗಗಳು ಕೂಡ ದೂರುದಾರನೇ ತೋರಿಸಿರುವ ಜಾಗಗಳಾಗಿವೆ. ಧರ್ಮಸ್ಥಳದ ಬಾಹುಬಲಿ ಮೂರ್ತಿ ಸ್ಥಾಪಿಸಿರುವ ರತ್ನಗಿರಿ ಬೆಟ್ಟದ ತಪ್ಪಲಿನಲ್ಲಿ 16ನೇ ಪಾಯಿಂಟ್ ಹಾಗೂ ಅದರ ಬಳಿ ಇರುವ 16 ಎ ಜಾಗದಲ್ಲಿ ಶೋಧಕಾರ್ಯ ನಡೆಸಲಾಗಿದೆ.