ಪ್ರಗತಿವಾಹಿನಿ ಸುದ್ದಿ; ಧಾರವಾಡ: ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬಿಜೆಪಿ ಮುಖಂಡ ಸೇರಿ 8 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧರವಾಡದ ನರೇಂದ್ರ ಗ್ರಾಮದ ನರೇಂದ್ರ ಶಾಲೆಯ ಬಳಿ ಜೂಜು ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಜೂಜುಕೋರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸನಗೌಡ ಕುತ್ತಿಗೆಗೆ ಗಾಯಗಳಾಗಿದ್ದರೆ ಕಾನ್ಸ್ ಟೇಬಲ್ ನಾಗರಾಜ್ ತಲೆಗೆ ಗಾಯವಾಗಿದೆ. ಪ್ರಕರಣದಲ್ಲಿ 8 ಜನರನ್ನು ಬಂಧಿಸಲಾಗಿದ್ದು, ಪೊಲಿಸರ ಮೇಲೆ ದಾಳಿ ನಡೆಸಿದ ಇನ್ನೂ 10 ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಧಾರವಾಡ ಎಸ್ ಪಿ ಗೋಪಾಲ್ ಬ್ಯಾಕೋಡ್ ತಿಳಿಸಿದ್ದಾರೆ.
ಮೂರು ದಿನಗಳಲ್ಲಿ 27 ಜೂಜಾಟದ ಪ್ರಕರಣಗಳು ದಾಖಲಾಗಿದ್ದು, 236 ಜನರನ್ನು ಬಂಧಿಸಲಾಗಿದೆ. 3.38 ಲಕ್ಷ ವಶಕ್ಕೆ ಪಡೆಯಲಾಗಿದೆ.
ಬಂಧಿತರಲ್ಲಿ ಬಿಜೆಪಿ ಮುಖಂಡ ಚನ್ನವೀರಗೌಡ ಪಾಟೀಲ್, ನಾಗಪ್ಪ ಸೋಗಿ, ವಿನಾಯಕ ಪಾಟೀಲ್, ಗಣೇಶ್ ಶಲವಾಡೆ, ಮಲ್ಲಪ್ಪ ಖಾನನ್ನವರ್, ಮಡಿವಾಳಪ್ಪ ಐಗಾರ, ಚನ್ನಪ್ಪಗೌಡ ಪಾಟೀಲ್, ಶ್ರೀಶೈಲ್ ಪಾಟೀಲ್ ಬಂಧಿತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ