ಪ್ರಗತಿವಾಹಿನಿ ಸುದ್ದಿ, ಲಂಡನ್: 2050 ರ ವೇಳೆಗೆ, ಸುಮಾರು 1.3 ಶತಕೋಟಿ ಜನರು (ಜಾಗತಿಕ ಜನಸಂಖ್ಯೆಯ 13.4%) ಮಧುಮೇಹವನ್ನು ಹೊಂದಲಿದ್ದಾರೆ ಲ್ಯಾನ್ಸೆಟ್ ಅಧ್ಯಯನ ಹೇಳಿದೆ.
ಅಧ್ಯಯನ ವರದಿ ಪ್ರಕಾರ ಇದು 2021 ರ ಅಂಕಿ ಅಂಶದ 529 ಮಿಲಿಯನ್ ಗಿಂತ ಎರಡು ಪಟ್ಟು ಹೆಚ್ಚಾಗಿದೆ. ಮುಂದಿನ ಮೂರು ದಶಕಗಳಲ್ಲಿ ಯಾವುದೇ ದೇಶವು ವಯಸ್ಸಿನ ಪ್ರಮಾಣಿತ ಮಧುಮೇಹ ದರಗಳಲ್ಲಿ ಇಳಿಕೆಗೆ ಸಾಕ್ಷಿಯಾಗುವುದಿಲ್ಲ ಎಂದು ಅದು ಸೂಚಿಸಿದೆ.
“ಹೆಚ್ಚಿದ ಜಾಗೃತಿಯ ಹೊರತಾಗಿಯೂ ಮಧುಮೇಹ ಅಪಾಯಕಾರಿಯಾಗಿ ಬೆಳೆಯುತ್ತಿದ್ದು ಜಾಗತಿಕವಾಗಿ ಹೆಚ್ಚಿನ ರೋಗಗಳನ್ನು ಮೀರಿಸಲಿದೆ” ಎಂದು ಪತ್ರಿಕೆ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ