
ಪ್ರಗತಿವಾಹಿನಿ ಸುದ್ದಿ: ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಸರ್ಕಾರದ ಸಿಎಸ್ ಬಳಿ ಆರೋಪ ಮಾಡಿದ್ದ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಲಾಗಿದೆ. ಡಿ.ರೂಪ ಅವರ ಮೇಲೆ ವರ್ತಿಕಾ ದಾಖಲೆಗಳ ಕಳುವು ಆರೋಪ ಮಾಡಿದ್ದರು.
ಐಜಿಪಿ ಡಿ.ರೂಪಾ ಅವರು ತಮ್ಮ ಕೆಳಹಂತದ ಅಧಿಕಾರಿಗಳನ್ನು ಬಳಸಿಕೊಂಡು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಕಳುವು ಮಾಡಿದ್ದಾರೆ. ಆ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಯುವ ಸಾಧ್ಯತೆ ಇದೆ ಎಂದು ಡಿಐಜಿ ವರ್ತಿಕಾ ಕಟಿಯಾರ್ ಆರೋಪಿಸಿದ್ದರು.
ಈ ರೀತಿಯಾಗಿ ಡಿ.ರೂಪ ಅವರ ವಿರುದ್ಧ ವರ್ತಿಕಾ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದರು. ಆದ್ರೆ ಇದೀಗ ದೂರು ನೀಡಿದ್ದ ವರ್ತಿಕಾ ಕಟಿಯಾರ್ ಅವರನ್ನೇ ಸರ್ಕಾರ ವರ್ಗಾವಣೆ ಮಾಡಿದೆ.
ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ಸ್ ವಿಭಾಗಕ್ಕೆ ಡಿಐಜಿ ಹಾಗೂ ಹೆಚ್ಚುವರಿ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ