
ಪ್ರಗತಿವಾಹಿನಿ ಸುದ್ದಿ: ಡಿಸಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದರೂ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸ್ನೇಹಿತೆಯರಿಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಲಿ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿಸಿ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಥೈಲಾಂಡ್ ನಿಂದ ಬೆಂಗಳೂರಿನ ಬಾಲ್ಯ ಸ್ನೇಹಿತೆಯ ಮನೆಗೆ ಬಂದಿದ್ದ ಸ್ನೇಹಿತೆ ಹಾಗೂ ಆಕೆಯ ಗೆಳತಿ ಇಬ್ಬರಿಗೂ ವಂಚಕರು ಡಿಸಿಟಲ್ ಅರೆಸ್ಟ್ ಹೆಸರಲ್ಲಿ ಮೋಸ ಮಾಡಿ ಹಣ ವರ್ಗಾಯಿಸಿಕೊಂಡಿದ್ದಾರೆ.
ಮುಂಬೈ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿರುವ ಸೈಬರ್ ವಂಚಕರು, ವಿಡಿಯೋ ಕಾಲ್ ಮೂಲಕ ದೈಹಿಕ ತಪಾಸಣೆ ಹೆಸರಲ್ಲಿ ಇಬ್ಬರು ಮಹಿಳೆಯರ ಬಟ್ಟೆ ಬಿಚ್ಚಿಸಿ ಬರೋಬ್ಬರಿ 9 ಗಂಟೆಗಳ ಕಾಲ ಕಿರುಕುಳ ನೀಡಿದ್ದಾರೆ. ಮಹಿಳೆಯರಿಬ್ಬರನ್ನು ವಿಡಿಯೋ ಕಾಲ್ ಮೂಲಕ ಬೆತ್ತಲೆಗೊಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 58,000 ರೂ. ಹಣ ನೀಡಿದ್ದಾರೂ ವಂಚಕರು ಮತ್ತೆ ಮತ್ತೆ ಕರೆ ಮಾಡಿ ಬೆದರಿಕೆಯೊಡ್ದುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಂಚನೆಗೊಳಗಾದ ಮಹಿಳೆಯರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.