ಸರಕಾರದಿಂದಲೇ ಕ್ರಿಪ್ಟೊ ಕರೆನ್ಸಿ: ವಿತ್ತ ಸಚಿವೆ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ ನವದೆಹಲಿ – ಮುಂಬರುವ ದಿನಗಳಲ್ಲಿ ಸರಕಾರ ಡಿಜಿಟಲ್ ಕರೆನ್ಸಿ ಜಾರಿಗೊಳಿಸುತ್ತಿರುವ ಬಗ್ಗೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

ಜೆಟ್ ಮಂಡನೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊರತರುವ ಕರೆನ್ಸಿ ಯಾವುದೇ ಮಾದರಿಯಲ್ಲಿದ್ದರೂ, ಅದು ಡಿಜಿಟಲ್ ರೂಪದಲ್ಲಿದ್ದು ಕ್ರಿಪ್ಟೋ ಕರೆನ್ಸಿಯಾಗಿದ್ದರೂ ಅಧೀಕೃತವೆ ಆಗಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ಆರ್‌ಬಿಐ ಹೊರತರುವ ಡಿಜಿಟಲ್ ಕರೆನ್ಸಿಯ ಹೊರತಾಗಿ ಮಾರುಕಟ್ಟೆಯಲ್ಲಿ ಚಲಾಚವಣೆಯಲ್ಲಿರುವ ಇನ್ಯಾವುದೇ ಕ್ರಿಪ್ಟೋ ಕರೆನ್ಸಿ ಅಧೀಕೃತವಲ್ಲ. ಅವುಗಳನ್ನು ಚರಾಸ್ತಿ ಎಂದು ಪರಿಗಣಿಸಲಾಗುತ್ತಿದೆ ಮತ್ತು ಶೇ.೩೦ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ ಅನಧೀಕೃತ ಕ್ರಿಪ್ಟೋ ಕರೆನ್ಸಿಯ ಚಲಾವಣೆಗೆ ಶೇ.೧ರಷ್ಟು ಟಿಡಿಎಸ್ ವಿಧಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಎಲ್‌ಐಸಿ ಖಾಸಗೀಕರಣ ಹೇಗೆ ? ಯಾಕೆ ?

ಈಗಾಗಲೇ ಏರ್ ಇಂಡಿಯಾ ಖಾಸಗೀಕರಣ ಮಾಡಿರುವ ಕೇಂದ್ರ ಸರಕಾರ ಎಐಎನ್‌ಎಲ್ ಖಾಸಗೀಕರಣ ಶೀಘ್ರದಲ್ಲಿ ಆಗಲಿದೆ. ಅದೇ ರೀತಿ ಎಲ್ ಐಸಿ ಸಂಪೂರ್ಣ ಖಾಸಗೀಕರಣದ ಚಿಂತನೆ ಇಲ್ಲ. ಒಟ್ಟು ೭೮ ಸಾವಿರ ಕೋಟಿಯ ಷೇರ್‌ಗಳ ಪರಭಾರೆಯ ಮೂಲಕ ಹೂಡಿಕೆ ಹಿಂತೆಗೆತದ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ವರ್ಷ ಸಂಸ್ಕರಿತ ಪೆಟ್ರೋಲ್ ಬಳಕೆ ಮತ್ತು ಮಾರಾಟಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಅದರ ದರ ಕಡಿಮೆ ಮಾಡುವ ಚಿಂತನೆ ಇದೆ. ಆರೋಗ್ಯ ಕ್ಷೇತ್ರಕ್ಕೆ ೫೦ ಸಾವಿರ ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಕೋವಿಡ್ ಎರಡನೇ ಅಲೆಯ ಬಳಿಕ ಆರೋಗ್ಯ ಕ್ಷೇತ್ರದಿಂದ ಪ್ರೋತ್ಸಾಹ ಧನಕ್ಕಾಗಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಯಾವುದರ ದರ ಏರಿಕೆ? ಯಾವುದು ಇಳಿಕೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button