CrimeKannada NewsKarnataka NewsLatest

*ಮ್ಯಾಟ್ರಿ ಮೋನಿ ವೆಬ್ ಸೈಟ್ ನಲ್ಲಿ ಪರಿಚಯ: ಮದುವೆಯಾಗುವುದಾಗಿ ನಂಬಿಸಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಹೇಳಿದ ಯುವತಿ: ಯುವಕನಿಂದ 21.22 ಲಕ್ಷ ದೋಚಿ ಎಸ್ಕೇಪ್*

ಪ್ರಗತಿವಾಹಿನಿ ಸುದ್ದಿ: ಮ್ಯಾಟ್ರಿ ಮೋನಿ ವೆಬ್ ಸೈಟ್ ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಯುವಕನನ್ನು ಮದುವೆಯಾಗುವುದಾಗಿ ನಂಬಿಸಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿ ಬರೋಬ್ಬರಿ 21.22 ಲಕ್ಷ ಹಣ ದೋಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಟಿ.ದಾಸರಹಳ್ಳಿಯ ಯುವಕ ರಾಕೇಶ್ ಗೆ ಕಮಿಷನ್ ಹೆಸರಲ್ಲಿ ವಂಚಿಸಿದ ಯುವತಿ ಈಗ ನಾಪತ್ತೆಯಾಗಿದ್ದಾಳೆ. ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಯವಾದ ಶಿರಿಷ ಎಂಬ ಯುವತಿ, ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾಳೆ. ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿ ಒತ್ತಾಯಿಸಿದ್ದಾಳೆ.

ಯುವತಿಯ ಮಾತು ನಂಬಿದ ಯುವಕ. ಆಕೆ ನೀಡಿದ ವೆಬ್ ಸೈಟ್ ಹಾಗೂ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿದ್ದಾನೆ. ಆರಂಭದಲ್ಲಿ ಲಾಭ ಬರುತ್ತಿರುವಂತೆ ತೋರಿಸ ಯುವತಿ ಹಣ ಡ್ರಾ ಮಾಡಲು ಕಮಿಷನ್ ಪಾವತಿ ಮಾಅಡಬೇಕು ಎಂದಿದ್ದಾಳೆ ಹೀಗೆ ಬರೋಬ್ಬರಿ 21.22 ಲಕ್ಷ ರೂಪಾಯಿ ಹಣ ಹಕಿಸಿಕೊಂಡಿದ್ದಾಳೆ. ಬಳಿಕ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ. ಹೂಡಿಕೆ ಮಾಡಿದ ಹಣದಲ್ಲಿ ಲಾಭ ಬರುವುದು ನಿಂತಿದೆ. ಇದ್ದಕ್ಕಿದ್ದಂತೆ ಹೂಡಿಕೆ ಹಣ ಲಾಭ ಬರುವುದು ನಿಲ್ಲುತ್ತಿದ್ದಂತೆ ಯುವಕನಿಗೆ ಆತಂಕ ಶುರುವಾಗಿದೆ. ಅಲ್ಲದೇ ಹೂಡಿಕೆ ಮಾಡಿದ ಹಣದ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಇತ್ತ ಯುವತಿ ಕೂಡ ಸಂಪರ್ಕಕ್ಕೆ ಸಿಗದಂತಾಗಿದ್ದಾಳೆ.

ಅತ್ತ ಹೂಡಿಕೆ ಹಣದ ಬಗ್ಗೆಯೂ ಮಾಅಹಿತಿ ಸಿಗುತ್ತಿಲ್ಲ. ಇತ್ತ ಮದುವೆಯಾಗುವುದಾಗಿ ಹೇಳುದ್ದ ಯುವತಿಯೂ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂದ ಯುವಕ ಬೆಂಗಳೂರು ಉತ್ತರ ಬಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ. ಈ ವೇಳೆ ತನಗೆ ಡಿಜಿಟಲ್ ವಂಚನೆಯಾಗಿರುವುದು ಅರಿವಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗುವವರ ಬಗ್ಗೆ ಹಾಗೂ ಹಣ ಹೂಡಿಕೆ ಮಾಡುವಂತೆ ಹೇಳುವವರ ಬಗ್ಗೆ ಕೊಂಚ ಎಚ್ಚರವಿರಲಿ. ಇದು ಕೂಡ ವಂಚಕರ ಸೈಬರ್ ವಂಚನೆ ಅಥವಾ ಡಿಜಿಟಲ್ ವಂಚನೆಯ ಹೊಸ ರೂಪವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button