ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಜಿಐಟಿಯ ಎಂಬಿಎ ವಿಭಾಗವು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತಮ್ಮ ವ್ಯವಹಾರಗಳನ್ನು ಉತ್ತೇಜಿಸಲು ಬೆಳಗಾವಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಚಿಲ್ಲರೆ ವ್ಯಾಪಾರಿಗಳು, ಕೈಗಾರಿಕೆಗಳು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತು ವಿಶೇಷ ಕೋರ್ಸ್ ಅನ್ನು ಪರಿಚಯಿಸುತ್ತಿದೆ.
ಒಂದು ತಿಂಗಳ ಕಾಲ ನಡೆಯುವಂತಹ, 40-ಗಂಟೆಗಳ ಅವಧಿಯ ಈ ಕೋರ್ಸ್, ಇದೇ ಜೂನ್ 15, 2023 ರಿಂದ ಪ್ರಾರಂಭವಾಗುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್‌ನ ವಿವಿಧ ಅಂಶಗಳ ಕುರಿತು ಸಮಗ್ರ ತರಬೇತಿ, ಅಗತ್ಯ ಕೌಶಲ್ಯ ಮತ್ತು ಜ್ಞಾನದೊಂದಿಗೆ ಹ್ಯಾಂಡ್ಸ್ ಆನ್ ಸೆಶನ್ ಗಳನ್ನೂ ನೀಡಲಿದೆ .
ಈ ಕೋರ್ಸ್ ಗೆ ನೋಂದಾಯಿಸಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳ ಅಗತ್ಯವಿಲ್ಲ, ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರುವ ಯಾರಾದರೂ ನೋಂದಾಯಿಸಿಕೊಳ್ಳಬಹುದು. ಕ್ಷೇತ್ರದ ಅನುಭವಿ ತಜ್ಞ ಡಾ. ಗೋವಿಂದರಾಜ್ ಆರ್ ಮಾನೆ ನೇತೃತ್ವದಲ್ಲಿ,ಈ ಕೋರ್ಸ್ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (ಎಸ್‌ಇಒ), ವಿಷಯ ರಚನೆ, ಇಮೇಲ್ ಮಾರ್ಕೆಟಿಂಗ್ ಒಳಗೊಂಡಂತೆ ಡಿಜಿಟಲ್ ಮಾರ್ಕೆಟಿಂಗ್ ನ ವಿವಿಧ ಆಯಾಮಗಳನ್ನು ಇದರಲ್ಲಿ ಕಲಿಸಲಿದ್ದಾರೆ. ಪ್ರಾಯೋಗಿಕ ಅನುಭವವು ಡಿಜಿಟಲ್ನಲ್ಲಿ ತಮ್ಮ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಮತ್ತು ವ್ಯಾಪಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಉದ್ಯಮಿಗಳು , ಚಿಲ್ಲರೆ ವ್ಯಾಪಾರಿ , ಸ್ಟಾರ್ಟ್ ಅಪ್ ಗಳಿಗೆ ಅನುವು ಮಾಡಿಕೊಡುತ್ತದೆ.
ಈ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಅಥವಾ ನೋಂದಾಯಿಸಲು , ಆಸಕ್ತರು ಡಾ. ಗೋವಿಂದರಾಜ್ ಆರ್ ಮಾನೆ, +91-9449751007 ನಲ್ಲಿ ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಎಲ್‌ಎಸ್ ಜಿಐಟಿಗೆ ಜನರಲ್ ಚಾಂಪಿಯನ್‌ಶಿಪ್ ಟ್ರೋಫಿ
https://pragati.taskdun.com/general-championship-trophy-for-kls-git/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ