Belagavi NewsBelgaum NewsPolitics

*ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ*

ಸಿಎಂ ರೇಸ್ ನಲ್ಲಿ ಯಾರೂ ಇಲ್ಲ ಎಂದು ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ: ಸಿಎಂ ರೇಸ್ ನಲ್ಲಿ ಯಾರೂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಬುಧವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರಿಗೆ ಸ್ಥಿರ ಸರಕಾರವನ್ನ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರದ್ದು ಸರಕಾರ ಅಸ್ಥಿರ ಮಾಡುವುದು, ಸರಕಾರ ಬೀಳಿಸುವುದು, ಸರಕಾರ ಒಡೆಯುವುದು, ಆಪರೇಷನ್ ಮಾಡುವುದು ಕೇಂದ್ರ ಸರಕಾರದವರಿಗೆ ಇದೇ ಕೆಲಸ ಆಗಿದೆ‌. ಕರ್ನಾಟಕದ ಅಭಿವೃದ್ಧಿ ಕೆಲಸವನ್ನ ಬಿಜೆಪಿ ಮುಖಂಡರು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಾಳೆ ಸಿಎಂ ಭವಿಷ್ಯ ನಿರ್ಧಾರ ಆಗುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಏನು ಆಗುವುದಿಲ್ಲ, ಸಿಎಂ ಅವರ ಭವಿಷ್ಯ ನಿರ್ಧಾರದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಸಿಎಂ ರೇಸ್ ನಲ್ಲಿ ಯಾರು ಇಲ್ಲಾ ಎಂದರು.

Home add -Advt


ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟ ಸಿಎಂ, ಭ್ರಷ್ಟ ಸಿಎಂ ಆಕಾಂಕ್ಷಿಗಳು ಪೋಸ್ಟ್ ವಿಚಾರಕ್ಕೆ ಉತ್ತರಿಸಿದ ಅವರು, ಅವರ ಸೋಷಿಯಲ್‌ ಮೀಡಿಯಾದಲ್ಲಿ ಏನೇನೂ ಹಾಕ್ತಿರತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ದೇಶದಲ್ಲಿ ನಂಬರ್ ಒನ್ ಅಲ್ವಾ, ಸುಳ್ಳು ಸುದ್ದಿ, ಪ್ರಚೋದನೆ ಮಾಡುವುದರಲ್ಲಿ ಬಿಜೆಪಿಯವರು ದೇಶದಲ್ಲಿ ನಂಬರ್ ಒನ್ ಬಿಜೆಪಿ ಎಂದರು.

ಕೋರ್ಟಿನಲ್ಲಿ ಏನು ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ಕೋರ್ಟ್ ನಲ್ಲಿ ರಾಜಪಾಲರು ತನಿಖೆ ಗೆ ಕೊಟ್ಟಿರುವುದು ಸರಿಯೋ ಇಲ್ಲವೋ ಅಷ್ಟೇ ಇರೋದು. ಅವರು ತಪ್ಪು ಮಾಡಿದ್ದಾರೆ ಅನ್ನೋದಿಲ್ಲ.ನಮ್ಮ ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಯಾವುದೇ ಅಧಿಕಾರದ ದುರುಪಯೋಗವು ಮಾಡಿಲ್ಲ.ರಾಜಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.


ಕುಮಾರಸ್ವಾಮಿ, ಜೋಲ್ಲೆ, ನಿರಾಣಿ ಮೇಲೆ ಇರೋ ಭ್ರಷ್ಟಚಾರದ ಕುರಿತು ಅರ್ಜಿ ರಾಜಪಾಲರ ಕಚೇರಿಯಲ್ಲಿ ತಿಂಗಳುಗಷ್ಟಲೇ ಹಾಗೇ ಬಿದ್ದಿದೆ. ರಾಜಪಾಲರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಇವಾಗ ಸಿಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣವೇ ನೋಟಿಸ್ ಕೊಟ್ಟಿದ್ದಾರೆ. ಇದರಲ್ಲಿ ರಾಜಪಾಲರ ಮನಸ್ಥಿತಿ ಗೊತ್ತಾಗುತ್ತದೆ. ಇದರಲ್ಲಿ ಪಕ್ಷಪಾತ ಮಾಡುತ್ತಿರೋದು ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯ ಮೇಲೆ ಯಾವುದೇ ದೋಷ ಇಲ್ಲವೇ ಇಲ್ಲಾ. ರಾಜಪಾಲರು ತನಿಖೆ ಗೆ ಕೊಟ್ಟಿರುವ ಅನುಮತಿ ಸರಿಯೋ ತಪ್ಪೋ ಅನ್ನೋದು ಅಷ್ಟೇ ಕೋರ್ಟ ಮುಂದೆಯಿದೆ. ಕೋರ್ಟ್ ನಲ್ಲಿ ಸಿಎಂ ತಪ್ಪು ಮಾಡಿದ್ದಾರೆ ಅನ್ನೋದು ಇಲ್ಲವೇ ಇಲ್ಲಾ ಎಂದರು.


ಇವತ್ತು ಖಾನಾಪುರ ತಾಲೂಕು ಆಸ್ಪತ್ರೆ ಉದ್ಘಾಟನೆ, ಗೋಕಾಕ ನಲ್ಲಿ ಆಸ್ಪತ್ರೆ ಕಾಮಗಾರಿ ಪರಿಶೀಲನೆ ಮಾಡ್ತಿನಿ
ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆಯಿದೆ. ವೈದ್ಯರ ಕೊರತೆ ನಿವಾರಿಸಲು ಪ್ರಯತ್ನ ಮಾಡುತ್ತಿದ್ದೇವೆ. ತಜ್ಞ ವೈದ್ಯರನ್ನ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದ್ದೇವೆ.

ನಿರೀಕ್ಷಿತ ಪ್ರಮಾಣದಲ್ಲಿ ತಜ್ಞ ವೈದ್ಯರು ಬರ್ತಾಯಿಲ್ಲ, ನಕಲಿ ವೈದರು ಎಲ್ಲಾ ಕಡೆಯಿದ್ದಾರೆ. ನಕಲಿ ವೈದ್ಯರ ವಿರುದ್ಧ ಕಾನೂನು ರೀತಿ ಮುಲಾಜಿಲ್ಲದೇ ಕ್ರಮ ಜರುಗಿಸಲು ಹೇಳಿದ್ದೇನೆ. ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದರು.

Related Articles

Back to top button