ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರಂಗದಲ್ಲಿ ಪ್ರಜಾರಾಜ್ಯ ಸಿನಿಮಾ ಮಾಡಿದ್ದ ನಿರ್ದೇಶಕ ಹರ್ಷವರ್ಧನ್ ಹೆಂಡತಿ ನಟಿ ಶಶಿಕಲಾ ವಿರುದ್ಧ ಇದೀಗ ದೂರು ನೀಡಿದ್ದಾರೆ.
ಹರ್ಷವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ 2020ರಲ್ಲಿ ನಿರ್ದೇಶಕರಾಗಿ ಹೊಸ ಸಿನಿಮಾದ ಶೂಟಿಂಗ್ ಶುರು ಮಾಡಿದ್ದರು. 2021ರ ಮಾರ್ಚ್ ನಲ್ಲಿ ಶೂಟಿಂಗ್ ಗೆ ಹೊಸ ಕಲಾವಿದೆಯಾಗಿ ಶಶಿಕಲಾ ಬಂದಿದ್ದರು. ಆಗ ಹರ್ಷವರ್ಧನ್ ನಂಬರ್ ಪಡೆದುಕೊಂಡಿದ್ದರು. ಇದಾದ ನಂತರ ಸಿನಿಮಾಗೆ ಹಣ ಹೂಡಿಕೆ ಮಾಡುತ್ತೇನೆ ಎಂದು ನಂಬಿಸಿ ತನ್ನೊಂದಿಗೆ ರಿಲೇಷನ್ ಶಿಪ್ ನಲ್ಲಿರುವಂತೆ ಒತ್ತಾಯ ಮಾಡಿದರು. ಆಗ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಾರೆ, ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂದು ನಂಬಿಕೊಂಡು ಅವರಿಂದಿಗೆ ರಿಲೇಷನ್‌ಶಿಪ್‌ನಲ್ಲಿ ಇರುವುದಕ್ಕೆ ಹರ್ಷವರ್ಧನ್ ಒಪ್ಪಿಕೊಂಡಿದ್ದಾರಂತೆ. ಆದರೆ, ನಟಿ ಶಶಿಕಲಾಗೆ ನಾನು ನಿಮ್ಮನ್ನು ಮದುವೆ ಆಗುವುದಿಲ್ಲ, ಸಿನಿಮಾಗೆ ಬಂಡವಾಳ ಹೂಡಿಕೆ ಮಾಡುವುದಾಗಿ ಭರವಸೆ ನೀಡುತ್ತಿದ್ದರಿಂದ ನಿಮ್ಮೊಂದಿಗೆ ಕೇವಲ ಸಂಬಂಧದಲ್ಲಿ ಇರುವುದಾಗಿ ಹರ್ಷವರ್ಧನ್ ಕಂಡೀಷನ್ ಹಾಕಿದ್ದರು. ಇದಕ್ಕೆ ನಟಿ ಶಶಿಕಲಾ ಕೂಡ ಒಪ್ಪಿಕೊಂಡಿದ್ದರಂತೆ. ಆದರೆ, ಸಂಬಂಧದಲ್ಲಿ ಇದ್ದ ಕೆಲವು ದಿನಗಳ ನಂತರ ಶಶಿಕಲಾ ತನ್ನನ್ನು ಮದುವೆ ಆಗುವಂತೆ ಬಲವಂತ ಮಾಡಿದ್ದಾರೆ. ನಂತರ ಹರ್ಷವರ್ಧನ್ ಆಗಲ್ಲ ಎಂದು ಹೇಳಿದಾಗ ತಾವಿಬ್ಬರೂ ಫೋನಿನಲ್ಲಿ ಖಾಸಗಿಯಾಗಿ ಮಾತನಾಡಿದ ಎಲ್ಲ ಕಾಲ್ ರೆಕಾರ್ಡ್ ಇಟ್ಟುಕೊಂಡು ಬೆದರಿಕೆ ಹಾಕಿದ್ದಾರೆ. ಜೊತೆಗೆ, ಅದೇನು ಮಾಡ್ತೀರೋ ಮಾಡಿಕೊಳ್ಳಿ ನಿಮ್ಮನ್ನು ಮದುವೆ ಆಗುವುದಿಲ್ಲ ಎಂದಾಗ ಹರ್ಷವರ್ಧನ್ ಕಚೇರಿಗೆ ಬಂದು ಹಲ್ಲೆ ಮಾಡಿದ್ದರು. ಆಗಲೂ ನಾನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಆದರೆ, ಇದಾದ ನಂತರ 2022ರಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿ ಜೈಲಿಗೆ ಹಾಕಿಸಿದ್ದಾರೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.
ಇನ್ನು ಹರ್ಷವರ್ಧನ್ ಜೈಲಿನಿಂದ ಹೊರ ಬಂದ ನಂತರ ನಿರ್ಮಾಪಕರು ಸಿನಿಮಾ ಮಾಡಲು ಬಿಡಲಿಲ್ಲ. ಕೆರಿಯರ್ ಹಾಳಾಗುತ್ತೆ ಅಂತ ಆಕೆಯ ಮದುವೆ ಆಗುವಂತೆ ಸಲಹೆ ನೀಡಿದ್ದರು. 2022ರ ಮಾರ್ಚ್ 5ನಲ್ಲಿ ಶಶಿಕಲಾ ಜೊತೆ ಹರ್ಷವರ್ಧನ್ ಮದುವೆಯಾಗಿದ್ದರಂತೆ. ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದೆ. ಮದುವೆ ನಂತರ ಮನೆಗೆ ನಿರ್ಮಾಪಕರು, ನಿರ್ದೇಶಕರು ಬರುತ್ತಿದ್ದರು. ನಾನು ಪ್ರಶ್ನೆ ಮಾಡಿದಾಗ ಮತ್ತೊಮ್ಮೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಿರ್ಮಾಪಕರು ಮನೆಗೆ ಬಂದಾಗ ನನ್ನನ್ನು ಬೇರೆಯವರ ಜೊತೆಗೆ ಮನೆಯಿಂದ ಹೊರ ಇರುವಂತೆ ಶಶಿಕಲಾ ಹೇಳುತ್ತಿದ್ದಾರೆ ಎಂದು ಪತಿ ಹರ್ಷವರ್ಧನ್ ಪತ್ನಿ ಶಶಿಕಲಾ ವಿರುದ್ಧ ದೂರು ನೀಡಿದ್ದಾರೆ.
2024ರ ಆಗಸ್ಟ್‌ನಲ್ಲಿ ಜಗಳ ಮಾಡಿ ಶಶಿಕಲಾ, ಹರ್ಷವರ್ಧನನನ್ನು ಮನೆಯಿಂದ ಹೊರ ಹಾಕಿದ್ದರಂತೆ. ಇದಾದ ನಂತರ ಆಕೆಯಿಂದ ದೂರ ಬಂದರೂ ಕೂಡ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಬ್ಲಾಕ್ ಮೇಲ್ ಮಾಡುತ್ತಾ ನನಗೆ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲವೆಂದು ಶಶಿಕಲಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ