Kannada NewsKarnataka NewsLatest
ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ಸೀಲ್ ಡೌನ್ : ಇನಸ್ಪೆಕ್ಟರ್, 10 ಸಿಬ್ಬಂದಿ ಕ್ವಾರಂಟೈನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಕ್ಯಾಂಪ್ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ.
ಜೂನ್ 27ರಂದು ಬಂಧಿಸಲಾಗಿರುವ ಆರೋಪಿಗೆ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕ್ಯಾಂಪ್ ಇನಸ್ಪೆಕ್ಟರ್ ಮತ್ತು 10 ಜನ ಸಿಬ್ಬಂದಿ ಆರೋಪಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವುದರಿಂದ ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.
ಪೊಲೀಸ್ ಠಾಣೆಯನ್ನು ಸೆನಿಟೈಸ್ ಮಾಡಲಾಗಿದ್ದು, ಓರ್ವ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆ ಬಳಿ ಕುಳಿತು ಕೆಲಸ ನಿರ್ವಹಿಸುತ್ತಿದ್ದಾರೆ. ಸೇವಾಕೇಂದ್ರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.