*ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ: ಸತೀಶ್ ಜಾರಕಿಹೊಳಿ ಆರೋಪಕ್ಕೆ ಲಕ್ಷ್ಮಣ ಸವದಿ ತಿರುಗೇಟು*
ಪ್ರಗತಿವಾಹಿನಿ ಸುದ್ದಿ: ಅವರು ಚುನಾವಣೆಯಲ್ಲಿ ಎಡವಿದ್ದಾರೆ. ಆ ಹಿನ್ನಲೆಯಲ್ಲಿ ಅಥಣಿಯಲ್ಲಿ ಕಾಂಗ್ರೆಸ್ ಗೆ ಮೈನಸ್ ಆಗಿದೆ. ಕಡಿಮೆ ಮತದಾನಕ್ಕೆ ಕೆಲ ದೋಷಗಳು ಕಾರಣವಾಗಿವೆ. ಇದನ್ನು ಬಹಿರಂಗವಾಗಿ ಚರ್ಚೆ ಮಾಡದೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಲೀಡ್ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು, ನನ್ನ ಮೇಲೆ ಆರೋಪ ಮಾಡುವವರು ಮೊದಲು ಈ ಕ್ಷೇತ್ರದ ಪಾರಂಪರಿಕ ಮತಗಳ ಕುರಿತು ಅರಿಯಲಿ. ಚುನಾವಣೆಯಲ್ಲಿ ಅವರು ಎಡವಿದ್ದಕ್ಕೆ ಹಿನ್ನಡೆ ಉಂಟಾಗಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡೆಸುವೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ, ಆದರೆ 2019 ರ ಉಪ ಚುನಾವಣೆಯಲ್ಲಿ ಬಿಜೆಪಿ ಲೀಡ್ ಪಡೆಯಿತು. ಆಯಾ ಸಮಯದಲ್ಲಿ ಬದಲಾವಣೆ ಆಗುತ್ತವೆ ಎಂದರು.
ಆಯಾ ಕ್ಷೇತ್ರದಲ್ಲಿ ಪಾರಂಪರಿಕ ಮತಗಳು ಇರುತ್ತವೆ. ಪಕ್ಷ ಹಾಗೂ ವ್ಯಕ್ತಿಯ ಆಧಾರದ ಮೇಲೆ ಕೆಲವು ಸಲ ಮತದಾನ ಆಗುತ್ತದೆ. ಈ ಹಿನ್ನಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ನಂತರ ಈಗ ಏಳು ಸಾವಿರ ಮತ ಮೈನಸ್ ಆಗಲು ಕಾರಣ ಆಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ