ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಕೊರೊನಾ ವೈರಸ್ ಗಿಂತಲೂ ಮರಕವಾದ ಸಾಂಕ್ರಾಮಿಕ ರೋಗಬರಲಿದ್ದು, ಡಿಸೀಸ್ X ಎಂಬ ಈ ಸೋಂಕು 20 ಮಿಲಿಯನ್ ಗಿಂತಲೂ ಹೆಚ್ಚು ಸಾವಿಗೆ ಕರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುಕೆ ಆರೋಗ್ಯ ತಜ್ಞ ಕೇಟ್ ಬಿಂಗ್ ಹ್ಯಾಮ್ ಈ ಬಗ್ಗೆ ಸಂದರ್ಶನದಲ್ಲಿ ಮಾಹಿತಿ ನೀಡಿದ್ದು, ಹೊಸ ವೈರಸ್ 1919-1920ರ ವಿನಾಶಕಾರಿ ಸ್ಪ್ಯಾನಿಷ್ ಫ್ಲೂಗೆ ಸಮಾನವಾದ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ಫ್ಲ್ಯೂ ಸಾಂಕ್ರಾಮಿಕವು 1918-19ರಲ್ಲಿ ವಿಶ್ವದಾದ್ಯಂತ 5 ಕೋಟಿ ಜನರನ್ನು ಕೊಂದಿತು. ಇದು ಮೊದಲ ಮಹಾಯುದ್ಧದಲ್ಲಿ ಸತ್ತವರ ಸಂಖ್ಯೆಗಿಂತ ಎರಡುಪಟ್ಟು ಹೆಚ್ಚು. ಈಗಾಗಲೇ ಅಸ್ತಿತ್ವದಲ್ಲಿರುವ ಹಲವು ವೈರಸ್ ಗಳಲ್ಲಿ ಒಂದರಿಂದ ಇಂದು ನಾವು ಇದೇ ರೀತಿಯ ಸಾವಿನ ಸಂಖ್ಯೆಯನ್ನು ನಿರೀಕ್ಷಿಸಬಹುದು. ಜಗತ್ತು ಸಾಮೂಹಿಕ ವ್ಯಾಕ್ಸಿನೇಷನ್ ಡ್ರೈವ್ ಗಳಿಗೆ ತಯಾರಿ ಮಾಡಬೇಕಾಗುತ್ತದೆ ಹಾಗೂ ತ್ವರಿತವಾಗಿ ಲಸಿಕೆಗಳನ್ನು ತಲುಪಿಸಬೇಕಾಗುತ್ತದೆ ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಡಿಸೀಸ್ X ವೈರಸ್ ಬ್ಯಾಕ್ಟೀರಿಯಂ ಅಥವಾ ಶಿಲೀಂಧ್ರದಿಂದ ಹರದಬಹುದು. ಸಧ್ಯಕ್ಕೆ ಈ ವೈರಸ್ ಗೆ ಯಾವುದೇ ಚಿಕಿತ್ಸೆಗಳಿಲ್ಲ ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ